ಕೊಪ್ಪಳ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪ

Advertisement

ಕುಷ್ಟಗಿ:ತಾಲೂಕಿನ ಹನಮಸಾಗರ ಗ್ರಾಮದಲ್ಲಿ ಕಳೆದೆರಡು ದಿನಗಳಿಂದ ಕೊಪ್ಪಳ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮಾರೋಪಗೊಂಡಿದೆ. ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ.ಉದಯ ಶಂಕರ ಪುರಾಣಿಕ ಅವರ ನೇತ್ರತ್ವದಲ್ಲಿ ಹಲವಾರು ನಿರ್ಣಯ ಮಂಡಿಸಲಾಯಿತು.
ಹನುಮಸಾಗರ ಗ್ರಾಮವನ್ನು ತಾಲೂಕು ಕೇಂದ್ರವನ್ನಾಗಿ ಸರಕಾರ ಘೋಷಣೆ ಮಾಡಬೇಕು ಇನ್ನೂ ಹಲವಾರು ನಿರ್ಣಯ ಕೈಗೊಳ್ಳುವುದರ ಮೂಲಕ ಹಲವಾರು ಗೊಂದಲಗಳು, ಸಮಸ್ಯೆಗಳ ಮಧ್ಯೆ ಸಮ್ಮೇಳನ ಜರುಗಿದೆ. ಹನಮಸಾಗರ ಗ್ರಾಮದ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಜರುಗಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕೊಪ್ಪಳ
ಕೊಪ್ಪಳ ಜಿಲ್ಲಾ ೧೨ನೇ ಕನ್ನಡ ಸಾಹಿತ್ಯ ಸಮ್ಮೇಳನದ ೧೦ ನಿರ್ಣಯಗಳು ತಗೆದುಕೊಳ್ಳಲಾಗಿದೆ.ನೂತನ ಕೊಪ್ಪಳ ವಿಶ್ವವಿದ್ಯಾಲಯಕ್ಕೆ ಸೂಕ್ತ ಅನುದಾನ ನೀಡಿ ಶೀಘ್ರವಾಗಿ ಸುಸಜ್ಜಿತ ವ್ಯವಸ್ಥೆ, ಸೌಲಭ್ಯ ಕಲ್ಪಿಸಬೇಕು.ಅದಕ್ಕೆ ಎಲ್ಲಾ ಜನಪ್ರತಿನಿಧಿಗಳು ಪಕ್ಷಭೇದ ಮರೆತು ಪ್ರಯತ್ನಿಸಬೇಕು.ಜಿಲ್ಲೆಯ ಎಲ್ಲಾ  ಬೃಹತ್ ಹಾಗೂ ಏತ ನೀರಾವರಿ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು.
ಕೊಪ್ಫಳ ಜಿಲ್ಲೆ, ಪ್ರತಿ ತಾಲೂಕಿಗೊಂದು ಕಲೆ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆ ಕಾರ್ಯಕ್ರಮಗಳಿಗೆ ಸಾಹಿತ್ಯ ಭವನಗಳನ್ನು ನಿರ್ಮಿಸಬೇಕು. ಹನುಮಸಾಗರ ತಾಲೂಕು ಕೇಂದ್ರವನ್ನಾಗಿ ಮಾಡಬೇಕು.ಹನುಮಸಾಗರ ಗ್ರಾಮ ಪಂಚಾಯಿತಿಯನ್ನು ಉನ್ನತಿಕರಿಸಿ ಪಟ್ಟಣ ಪಂಚಾಯಿತಿ ಘೋಷಣೆ ಮಾಡಬೇಕು.
ಕನ್ನಡ ಮಾಧ್ಯಮದಲ್ಲಿ ತಾಂತ್ರಿಕ ಹಾಗೂ ವೈದ್ಯಕೀಯ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ಶೇ. ೫೦ ರಷ್ಟು ನೌಕರಿಯಲ್ಲಿ ಮೀಸಲಾತಿ ನೀಡಬೇಕು. ಕೊಪ್ಪಳ ಜಿಲ್ಲೆಗೆ ಐ.ಟಿ. ಪಾರ್ಕ್ ಸ್ಥಾಪನೆಯಾಗಬೇಕು ಹಾಗೂ ವಿಜ್ಞಾನ ಕೇಂದ್ರ ಆರಂಭವಾಗಬೇಕು.ತುಂಗಾಭದ್ರ ನದಿಯ ಹೂಳನ್ನು ತೆಗೆಯಲು ತಂತ್ರಜ್ನ್ಗಾನ ಬಳಸುವುದರ ಮೂಲಕ ನ್ಯಾನೋ ಸಿಮೆಂಟ್ ತಯಾರಿಕೆ-ಉತ್ಪಾದನೆ ಮೂಲಕ ಉದ್ಯೋಗ ಸೃಷ್ಠಿಯಾಗಿ,ಹೆಚ್ಚಿನ ನೀರು ನೀರಾವರಿ ಬಳಕೆಗೆ ಸರಕಾರ ಕ್ರಮ ತೆಗೆದುಕೊಳ್ಳಬೇಕು.ಬೆಣಕಲ್ ಐತಿಹಾಸಿಕ ಸ್ಥಳವನ್ನು ಯುನಿಸ್ಕೋ ಪಟ್ಟಿಗೆ ಸೇರಿಸಬೇಕು.ಡಾ.ಉದಯ ಶಂಕರ ಪುರಾಣಿಕ ಅವರನ್ನು ಮುಂದಿನ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಮಾಡಲು ನಿರ್ಣಯ ಮಂಡಿಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಶರಣೇಗೌಡ ಮಾಲಿ ಪಾಟೀಲ್,ತಾಲೂಕು ಅಧ್ಯಕ್ಷ ವೀರೇಶ್ ಬಂಗಾರ ಶಟ್ಟರ್,ಹೋಬಳಿ ಘಟಕದ ಅಧ್ಯಕ್ಷ ಮಂಜುನಾಥ ಗುಳೇದಗುಡ್ಡ, ಪ್ರಮುಖರಾದ ಮಹಾಂತೇಶ ಅಗಸಿಮುಂದಿನ, ಬಸವರಾಜ ಹಳ್ಳೂರ, ಸೂಚಪ್ಪ ದೇವರಮನಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಂಕ್ರಮ್ಮ ನಿರ್ವಾಣಿ, ಉಪಾಧ್ಯಕ್ಷ ಮಂಜುನಾಥ ಹುಲ್ಲೂರ, ಕಸಾಪ ತಾಲ್ಲೂಕು ಕಾರ್ಯದರ್ಶಿ ಲೆಂಕಪ್ಪ ವಾಲಿಕಾರ,ಕಸಾಪ ಮಾಜಿ ಅಧ್ಯಕ್ಷ ಶ್ರೀನಿವಾಸ ಜಾಹಗೀದಾರ,ಮಹೇಶ ಹಡಪದ,ಜೀವನಸಾಬ್ ವಾಲಿಕಾರ, ಶರಣಪ್ಪ ವಡಗೇರಿ, ಶಿವಪುತ್ರಪ್ಪ ಕಬ್ಬರಗಿ, ಅಮರೇಶ ಜವಳಿ ಇತರರು ಭಾಗಿ.ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.