ಕೊರಡು ಕೊನರುವುದು, ಬರಡು ಹಯನವುದು

Annadanishwara Swami
Advertisement

ಮೇಲಿನ ಯಕ್ತಿ ಪ್ರಸಿದ್ಧವಾದದ್ದು. ಇದು ನಿಜ ಶರಣನಿಸಿದ ಮೈಲಾರ ಬಸವಲಿಂಗ ಶರಣರು ಗುರುಕರುಣ ತ್ರಿವಿಧಿಯಲ್ಲಿ ಈ ಮಾತನ್ನು ಸುಂದರವಾಗಿ ಚಿತ್ರಿಸರುವರು `ಕೊರಡು ಕೊನರುವುದು ಬಲು ಬರಡು ಹಯನವುದು ಕುರುಡಂಗೆ ಕಣ್ಣು ಬಹುದು ನಿನ್ನೊಲುಮೆ ಎಂದರಿದ ಎನ್ನ ಗುರುವೇ ಕೃಪಾಯಾಗು.. ಗುರುಕರುಣೆಯೆಂಬುದು ಮಹತ್ವದ ಅಂಶವಾಗಿದೆಲ್ಲ ಸಾಧ್ಯವಾಗುವದು. ಕೊರಡು ಎಂದರೆ ಒಣಕಟ್ಟಿಗೆ ತುಂಡು, ಬರಡು ಎಂದರೆ ಗೊಡ್ಡಾಕಳು, ಕರುವನ್ನು ಹಾಕದರುವುದು, ಹಯನೀಲ್ಲವಿರುವುದು, ಒಣಕಟ್ಟಿಗೆ ಎಂದೂ ಚಿಗುರುಲಾರದು. ಆದರೆ ಗುರುವಿನ ಕೃಪೆಯಾದರೆ ಅದು ಸಾಧ್ಯವಾಗುತ್ತದೆಂದು ತೋರಿದ್ದಾರೆ.
ಹಿಂದಿನ ಗಡ್ಡದ ಹಾಲಕೆರೆಯ ಪರಮಪೂಜ್ಯರು ಹಿಮಾಲಯಕ್ಕೆ ಸಂಚಾರ ಮಾಡಿದರು. ಆಗ ಬಹುದೂರದ ಪ್ರಯಾಣ, ತಮ್ಮಲಿನ ಕ್ಷೇಮ ಹೇಗೆ ತಿಳಿಯುವುದು ಎಂದು ಪ್ರಶ್ನಿಸಿದಾಗ, ಪೂಜ್ಯರು-ನುಡಿದರು ನಾನು ಸುಖವಾಗಿದ್ದೇನೆಂದು ತಿಳಿಯುವುದ್ದಾದರೇ ಪ್ರವರ್ತನಕ್ಕಾಗಿ ಹಾಕಿದ ಮಠದ ಮುಂದಿನ ಮಂಟಪದ ಕಟ್ಟಿಗೆ ಚಿರುಗುವುದೆಂದು ತಿಳಿಸಿದ್ದರು. ಹಾಗೇಯೇ ಹಂದರದ ಕಂಬಗಳು ಚಿಗರಿದ್ದವು. ಗೊಡ್ಡಾಕಳು ಪುನಃ ಕರು ಹಾಕಿ ಹಾಲುಕೊಟ್ಟ ಉದಾಹರಣೆಗಳಿವೆ. ಮತ್ತು ಗಾವಿಲರಿಗೆ ದೃಷ್ಟಿ ಪ್ರಾಪ್ತಿಯಾದ ಅನೇಕ ಉದಾಹರಣೆಗಳು ಇವೆ. ಗರುನಾಥನ ಆಶೀರ್ವಾದವಾದರೆ ಅದು ಸಾಧ್ಯವಾದುದೇ ಸಾಧ್ಯವಾಗುತ್ತದೆ. ಗುರುಸೇವೆಯಿಂದ ಗುರುಕೃಪೆ ಸಾಧ್ಯ. ಗುರುಕಾರುಣ್ಯದಿಂದಲೇ ದೇವರನ್ನು ಕಾಣುವ ದಾರಿ ಮತ್ತು ಸಾಧನಾ ಪಥ ದೊರಕುತ್ತದೆ. ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂದು ಕೂಡ ದಾಸರು ಹೇಳಿದ್ದಾರೆ. ಮುಕ್ತಿಪಥಕ್ಕೆ ದಾರಿ ತೋರುವವನೂ ಕೂಡ ಗುರುವೇ ಆಗಿದ್ದಾರೆ. ಅಷ್ಟೇ ಏಕೆ; ಲೋಕದ ಸೃಷ್ಟಿ, ಸ್ಥಿತಿ, ಲಯಕರ್ತ ಮೂವರನ್ನು ಸಾಕ್ಷಾತ ಗುರುವಿಗೆ ಹೋಲಿಸಿದ್ದು ಔಚಿತ್ಯವೂ ಆಗಿದೆ.