ಕ್ಲೌಡಿಯಾ ಗೋಲ್ಡಿನ್​ಗೆ ನೊಬೆಲ್ ಪ್ರಶಸ್ತಿ

Advertisement

ಮಹಿಳಾ ಕಾರ್ಮಿಕ ಮಾರುಕಟ್ಟೆಯ ಫಲಿತಾಂಶಗಳ ಬಗ್ಗೆ ನಮ್ಮ ತಿಳುವಳಿಕೆಯನ್ನು ಅಭಿವೃದ್ಧಿಪಡಿಸಿದ್ದಕ್ಕಾಗಿ ಪ್ರಾಧ್ಯಾಪಕಿ ಕ್ಲೌಡಿಯಾ ಗೋಲ್ಡಿನ್ ಅವರಿಗೆ 2023 ನೇ ಸಾಲಿನ ಅರ್ಥಶಾಸ್ತ್ರ ವಿಭಾಗದ ನೊಬೆಲ್​ ಪ್ರಶಸ್ತಿಯನ್ನು ಸೋಮವಾರ ಘೋಷಿಸಲಾಗಿದೆ.
2023 ರ ಅರ್ಥಶಾಸ್ತ್ರ ನೊಬೆಲ್​ ಪ್ರಶಸ್ತಿ ವಿಜೇತರಾದ ಕ್ಲೌಡಿಯಾ ಗೋಲ್ಡಿನ್ ಅವರು ಶತಮಾನಗಳಿಂದ ಮಹಿಳೆಯರ ಗಳಿಕೆ ಮತ್ತು ಅವರು ವಿವಿಧ ಕ್ಷೇತ್ರಗಳಲ್ಲಿ ಭಾಗವಹಿಸುವಿಕೆಯ ಮೊದಲ ಸಮಗ್ರ ಮಾಹಿತಿಯನ್ನು ಒದಗಿಸಿದ್ದಾರೆ ಎಂದು ನೊಬೆಲ್​ ಪ್ರಶಸ್ತಿ ನೀಡುವ ರಾಯಲ್​ ಸ್ವೀಡಿಸ್ ಅಕಾಡೆಮಿ ಅಭಿಪ್ರಾಯಪಟ್ಟಿದೆ.