ಖಾರದ ಪುಡಿ ಎರಚಿ 30 ಹಂದಿಗಳ ಕಳವು

Advertisement

ಕುಷ್ಟಗಿ: ಹಂದಿ ಸಾಗಾಣಿಕೆ ಘಟಕದಲ್ಲಿ ಕೆಲವೊಂದಿಷ್ಟು ದುಷ್ಕರ್ಮಿಗಳು ಸಾಕಾಣಿಕೆದಾರರಿಗೆ ಚಾಕು ತೋರಿಸಿ ಕಾರದಪುಡಿ ಎರಚಿ ಹಂದಿಗಳಿಗೆ ಕೈ, ಕಾಲು ಕಟ್ಟಿ ೩೦ ಹಂದಿಗಳನ್ನು ಕಳ್ಳತನ ಮಾಡಿದ ಪ್ರಸಂಗ ಜರುಗಿದೆ.
ತಾಲೂಕಿನ ವಣಗೇರಾ ಗ್ರಾಮದ ಹತ್ತಿರ ಇರುವ ರವಿಕುಮಾರ ಭಜಂತ್ರಿ ಸೇರಿದ ಹಂದಿ‌ ಸಾಕಾಣಿಕ‌ ಘಟಕದಲ್ಲಿ 31ಮಾಂಸದ ಹಂದಿಗಳನ್ನು ಸಾಕಿ ಉದ್ಯೋಗ ಮಾಡಿ ಆದಾಯ ಪಡೆದುಕೊಳ್ಳತ್ತಿದ್ದರು. ಆದರೆ ದುಷ್ಕರ್ಮಿಗಳು ಮಾಡಿದ ಹೀನ ಕೃತ್ಯದಿಂದ ಸಾಕಿದ ಎಲ್ಲಾ ಹಂದಿಗಳನ್ನು ಕಳೆದುಕೊಂಡು ಕೈಕಟ್ಟಿ ಕುಳಿತುಕೊಳ್ಳುವ ಅಂತಹ ಸ್ಥಿತಿ ಬಂದಿದೆ. ಜ.೪ ರಂದು ರಾತ್ರಿ ಸಮಯದಲ್ಲಿ ನಾಲ್ಕೈದು ಜನ ದುಷ್ಕರ್ಮಿಗಳು, ಸಾಕಾಣಿಕ ಘಟಕದಲ್ಲಿ ಮಲಗಿದ್ದ ರವಿಕುಮಾರ ಹಾಗೂ ಸಂಬಂಧಿಕರಿಗೆ ದುಷ್ಕರ್ಮಿಗಳು ಭಯಾನಕ ರೀತಿಯಲ್ಲಿ ಚಾಕುತೋರಿಸಿ ಸಾಗಾಣಿಕೆ ಘಟಕದಲ್ಲಿ ಇದ್ದಂತಹ ಹಂದಿಗಳನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ.
ಕಣ್ಣಿಗೂ ಖಾರಪುಡಿ: ಹಂದಿ ಸಾಗಾಣಿಕೆ ಘಟಕದಲ್ಲಿ ಮಲಗಿದ್ದ ವ್ಯಕ್ತಿಗಳಿಗೆ ಅನಾಮದೇಯ ದುಷ್ಕರ್ಮಿಗಳು ರವಿಕುಮಾರ್ ಭಜಂತ್ರಿ ಹಾಗೂ ಆತನ ಸಂಬಂಧಿಕ ಇಬ್ಬರಿಗೂ ಕೈಗೆ ಮತ್ತು ಕಾಲಿಗೆ ಹಗ್ಗ ಕಟ್ಟಿ ಕಾರದ ಪುಡಿ ಎರಚಿ ಒಟ್ಟು 31 ಹಂದಿಗಳ ಪೈಕಿ ಒಂದು ಹಂದಿಗೆ ಗಾಯಗೊಂಡಿದ್ದು, ಅದನ್ನು ಬಿಟ್ಟು ಇನ್ನುಳಿದ ೩೦ ಹಂದಿಗಳನ್ನು ತೆಗೆದುಕೊಂಡು ಹೋಗಿದ್ದಾರೆ.ಹಂದಿಗಳ‌ ಮೌಲ್ಯ 6 ರಿಂದ 7 ಲಕ್ಷ ರೂ. ಎಂದು ‌ಅಂದಾಜಿಸಲಾಗಿದೆ. ದುಷ್ಕರ್ಮಿಗಳು ಹಂದಿಗಳನ್ನು ಕಳವು ಮಾಡುವ ಮೊದಲು ನಾಯಿಗಳು ಶಬ್ದ ಮಾಡುತ್ತಿದ್ದಂತೆ ಮಾಂಸದ ಆಸೆ ತೋರಿಸಿ ಕಳ್ಳತನ ಮಾಡಿದ್ದಾರೆ. ಈ ಕುರಿತು ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಹೆಚ್ಚುವರಿ‌ ಎಸ್ಪಿ ಹೇಮಂತ್, ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ, ಸಿಪಿಐ ಯಶವಂತ ಬಿಸನಳ್ಳಿ,  ಪಿಎಸೈ ಮುದ್ದುರಂಗಸ್ವಾಮಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.ಹಂದಿ‌ ಸಾಗಾಣಿಕೆ ಮಾಡುವವರು ಹಂದಿ ಕಳ್ಳರಾಗಿದ್ದಾರೆ. ವಣಗೇರಾ ಹಂದಿ ಕಳವು ಪ್ರಕರಣದ ಕುರಿತು  ಹೆದ್ದಾರಿ ಟೋಲ್‌ಗಳ‌ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಲಾಗಿದೆ. ಚಾಲಾಕಿ ಕಳ್ಳರು ಟೋಲ್ ಮೂಲಕ ಸಾಗದೇ ಟೋಲ್ ತಪ್ಪಿಸಿ  ಹೋಗಿರಬಹುದು ಎನ್ನಲಾಗುತ್ತಿದೆ. ಕುಷ್ಟಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹಂದಿ ಕಳ್ಳರ ಪತ್ತೆಗೆ ಕ್ರಮ‌ ಕೈಗೊಂಡಿದ್ದಾರೆ.