ಹುಬ್ಬಳ್ಳಿ : ಕೇಂದ್ರ ಸರ್ಕಾರದ ಯುವ ಹಾಗೂ ಕ್ರೀಡಾ ಸಚಿವಾಲಯ, ಭಾರತೀಯ ಕ್ರೀಡಾ ಪ್ರಾಧಿಕಾರ ಹಾಗೂ ತಮಿಳುನಾಡು ಸರ್ಕಾರದ ಸಹಯೋಗದಲ್ಲಿ ಮಧುರೈ ನಗರದಲ್ಲಿ ಜನವರಿ 26 ರಿಂದ 31 ರವರೆಗೆ ಜರುಗಿದ ಖೇಲೋ ಇಂಡಿಯಾದ ರಾಷ್ಟ್ರೀಯ ಖೋ ಖೋ ಕ್ರೀಡಾಕೂಟದ ತೀರ್ಪುಗಾರರಾಗಿ ಕರ್ನಾಟಕದ ಚಿದಾನಂದ ಅರವಿಂದಪ್ಪ ನಾಯ್ಕರ್ ಕಾರ್ಯನಿರ್ವಹಿಸಿದ್ದಾರೆ.
ಮೂಲತಃ ಕುಂದಗೋಳ ತಾಲೂಕಿನ ಪಶುಪತಿಹಾಳ ಗ್ರಾಮದ ಚಿದಾನಂದ ನಾಯ್ಕರ್ ಅವರು, ಧಾರವಾಡ ಜಿಲ್ಲಾ ಖೋ ಖೋ ಅಸೋಸಿಯೇಷನ್ ಕಾರ್ಯದರ್ಶಿ ಹಾಗೂ ಧಾರವಾಡದ ಕೆಎಲ್‌ಇ ಆರ್‌ಎಲ್‌ಎಸ್ ಪ.ಪೂ.ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಖೇಲೋ ಇಂಡಿಯಾ ಖೋ ಖೋ ಕ್ರೀಡಾಕೂಟದ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದ ಕರ್ನಾಟಕದ ಏಕೈಕ ವ್ಯಕ್ತಿ ಇವರಾಗಿದ್ದಾರೆ ಎಂಬುದು ವಿಶೇಷ.
ಚಿದಾನಂದ ಅವರ ಈ ಸಾಧನೆಗೆ ಪಶುಪತಿಹಾಳ ಗ್ರಾಮಸ್ಥರು, ಆರ್.ಎಲ್.ಎಸ್ ಕಾಲೇಜಿನ ಆಡಳಿತ ಮಂಡಳಿ, ಪ್ರಾಚಾರ್ಯರು ಹರ್ಷ ವ್ಯಕ್ತಪಡಿಸಿದ್ದಾರೆ