ಖೋ ಖೋ: ಕರ್ನಾಟಕ ದ್ವಿತೀಯ – ತಂಡದಲ್ಲಿ ಲೇಖನ ಭಾಗಿ

Advertisement

ಶ್ರೀರಂಗಪಟ್ಟಣ: ಅ.06 ರಿಂದ 08 ರ ವರೆಗೆ ತಮಿಳುನಾಡು ಹೊಸೂರಿನಲ್ಲಿ ನಡೆದ ರಾಷ್ಟ್ರ ಮಟ್ಟದ “ಅಸ್ಮಿತ ಖೇಲೋ ಇಂಡಿಯಾ” ಬಾಲಕಿಯರ ಖೋಖೋ ಪಂದ್ಯಾವಳಿಯಲ್ಲಿ ಕರ್ನಾಟಕ ಜೂನಿಯರ್ ಹಾಗೂ ಸಬ್ ಜೂನಿಯರ್ ತಂಡಗಳು ದ್ವಿತೀಯ (ರನ್ನರ್) ಸ್ಥಾನ ಪಡೆದು ನವೆಂಬರ್ ನಲ್ಲಿ ನಡೆಯಲಿರುವ ಆಲ್ ಇಂಡಿಯಾ ಖೋಖೋ ಪಂದ್ಯಾವಳಿಗೆ ಅರ್ಹತೆ ಪಡೆದುಕೊಂಡಿವೆ.
ತೀವ್ರ ಕುತೂಹಲದಿಂದ ಫೈನಲ್ ಪಂದ್ಯದಲ್ಲಿ ತಮಿಳುನಾಡು ಜೂನಿಯರ್ ಹಾಗೂ ಸಬ್ ಜೂನಿಯರ್ ತಂಡಗಳ ವಿರುದ್ದ ಕರ್ನಾಟಕದ ಎರಡೂ ತಂಡಗಳು ಸೋಲನುಭವಿಸಿ ದ್ವಿತೀಯ ಸ್ಥಾನ ಪಡೆದುಕೊಂಡವು.

ಇನ್ನುಳಿದಂತೆ ಜೂನಿಯರ್ ವಿಭಾಗದಲ್ಲಿ ತಮಿಳುನಾಡು‌ ಪ್ರಥಮ, ಕರ್ನಾಟಕ ದ್ವಿತೀಯ, ಕೇರಳ‌ ತೃತೀಯ, ಆಂದ್ರ ಪ್ರದೇಶ ನಾಲ್ಕನೇ ಸ್ಥಾನ ಪಡೆದರೆ, ಸಬ್ ಜೂನಿಯರ್ ವಿಭಾಗದಲ್ಲಿ ತಮಿಳುನಾಡು ಪ್ರಥಮ, ಕರ್ನಾಟಕ ದ್ವಿತೀಯ, ಪುದುಚೇರಿ‌ ತೃತೀಯ ಹಾಗೂ ಕೇರಳ ನಾಲ್ಕನೇ ಸ್ಥಾನ ಪಡೆದುಕೊಂಡವು.
ಹೊಸೂರಿನ ಸೆಂಟ್ ಜಾನ್ ಬೋಸ್ಕೋ‌ ಶಾಲಾ ಆವರಣದಲ್ಲಿ‌ ಕ್ರೀಡಾಕೂಟವನ್ನು ಆಯೋಜಕರು ಯಶಸ್ವಿಯಾಗಿ ನೆರವೇರಿಸಿದ್ದರು. ರಾಷ್ಟ್ರ ಮತ್ತು ರಾಜ್ಯ ಖೋಖೋ‌ ಅಸೋಷಿಯೇಷನ್ ನ ಪ್ರಮುಖರು ಭಾಗಿಯಾಗಿ ಬಹುಮಾನ ವಿತರಣೆ ಮಾಡಿದರು.


ಕರ್ನಾಟಕ ತಂಡದಲ್ಲಿ ಶ್ರೀರಂಗಪಟ್ಟಣದ ಲೇಖನ ಭಾಗಿ:
ಕರ್ನಾಟಕ ಸಬ್ ಜೂನಿಯರ್ ತಂಡದಲ್ಲಿ ಶ್ರೀರಂಗಪಟ್ಟಣ ತಾಲ್ಲೂಕು ಸಂಯುಕ್ತ ಕರ್ನಾಟಕ ಪತ್ರಿಕೆಯ ವರದಿಗಾರ‌ ಅಲ್ಲಾಪಟ್ಟಣ ಸತೀಶ್ ರವರ ಮಗಳು ಪಟ್ಟಣದ ನ್ಯೂ ಆಕ್ಸ್ ಫರ್ಡ್ ಶಾಲಾ ವಿದ್ಯಾರ್ಥಿನಿ ಲೇಖನ.ಎಸ್ ಭಾಗವಹಿಸಿ ಗಮನ ಸೆಳೆದರು. ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದ ಲೇಖನಾರವರಿಗೆ ತಾಲ್ಲೂಕಿನ ಪ್ರಮುಖರು, ವಿವಿಧ ಸಂಘಟನೆಗಳು ಹಾಗೂ ಶಾಲಾ‌ ಆಡಳಿತ ಮಂಡಳಿ ಶುಭ ಕೋರಿದ್ದಾರೆ.