ಖ್ಯಾತ ನಟ ರವೀಂದ್ರ ಮಹಾಜನಿ ಆತ್ಮಹತ್ಯೆ

Advertisement

ಮರಾಠಿ ಚಿತ್ರರಂಗದ ಖ್ಯಾತ ನಟ ರವೀಂದ್ರ ಮಹಾಜನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸುಮಾರು ಮೂರು ದಿನಗಳ ಹಿಂದೆ ರವೀಂದ್ರ ಅವರು ಸಾವನ್ನಪ್ಪಿರಬಹುದು ಎಂದು ವೈದ್ಯರು ಹೇಳಿದ್ದಾರೆ.
ಅವರಿಗೆ 77 ವರ್ಷ ವಯಸ್ಸಾಗಿತ್ತು. ಅವರ ಫ್ಲಾಟ್‌ನಲ್ಲಿ ಶವ ಪತ್ತೆಯಾಗಿದೆ. ಪುಣೆಯ ತಾಳೇಗಾಂವ್ ದಭಾಡೆ ಸಮೀಪದ ಅಂಬಿ ಗ್ರಾಮದಲ್ಲಿ ರವೀಂದ್ರ ಅವರು ಬಹಳ ದಿನಗಳಿಂದ ವಾಸವಾಗಿದ್ದರು. ಅವರು ಉಳಿದುಕೊಂಡಿದ್ದ ಫ್ಲಾಟ್​ನಿಂದ ಇತ್ತೀಚೆಗೆ ದುರ್ವಾಸನೆ ಬರಲು ಆರಂಭ ಆಗಿತ್ತು. ಸ್ಥಳಿಯರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ ಮನೆಯ ಬಾಗಿಲು ಒಡೆದು ನೋಡಿದಾಗ ರವೀಂದ್ರ ಮೃತಪಟ್ಟ ವಿಚಾರ ಗೊತ್ತಾಗಿದೆ. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ರವೀಂದ್ರ ಅವರ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮರಾಠಿ ಚಿತ್ರರಂಗದ ವಿನೋದ್ ಖನ್ನಾ ಎಂದು ಕರೆಯಲಾಯಿತು. ಮರಾಠಿ ಮಾತ್ರವಲ್ಲದೆ, ಗುಜರಾತಿ ಸಿನಿಮಾಗಳಲ್ಲೂ ಅವರು ನಟಿಸಿದ್ದಾರೆ.