ಗಡಿ ವಿವಾದ ರಾಜಕೀಯ ಪ್ರೇರಿತ: ಪ್ರಮೋದ ಮುತಾಲಿಕ್‌

Advertisement

ಚಿಕ್ಕಮಗಳೂರು: ಗಡಿ ವಿವಾದ ರಾಜಕೀಯ ಪ್ರೇರಿತವಾಗಿದ್ದು, ಬೆಳಗಾವಿಯಲ್ಲಿ ಕನ್ನಡಿಗರು-ಮರಾಠಿಗಳರು ಸಹೋದರರಂತೆ ಇದ್ದಾರೆ. ರಾಜಕೀಯ ಬೆಳೆ ಬೇಯಿಸಿಕೊಳ್ಳಲು ಕರ್ನಾಟಕ-ಮಹಾರಾಷ್ಟ್ರದ ರಾಜಕೀಯ ನಾಯಕರು ಕಿಡಿ ಹಚ್ಚುತ್ತಿದ್ದಾರೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್‌ ಆರೋಪಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗಡಿ ವಿವಾದ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿದೆ. ಬೇಕಾದಂತೆ ಮಾತನಾಡಿದರೆ ನ್ಯಾಯಾಂಗ ನಿಂದನೆ ಆಗುತ್ತೆ. ಮಹಾರಾಷ್ಟ್ರ ಬಿಜೆಪಿ-ಕಾಂಗ್ರೆಸ್ ಬೆಳಗಾವಿ ಮಹಾರಾಷ್ಟ್ರದ್ದು ಅಂತಾರೆ.
ಕರ್ನಾಟಕ ಬಿಜೆಪಿ-ಕಾಂಗ್ರೆಸ್ ಬೆಳಗಾವಿ ಕರ್ನಾಟಕದ್ದು ಅಂತಾರೆ. ರಾಷ್ಟ್ರೀಯ ಪಕ್ಷಗಳೇ ದ್ವಂದ್ವ ನಿಲುವು ತಾಳುತ್ತಿವೆ. ಸುಪ್ರೀಂ ಕೋರ್ಟಿನಿಂದ ತೀರ್ಪು ಬರುವವರೆಗೂ ಬಾಯಿ ಮುಚ್ವಿಕೊಂಡು ಇರಿ ಎಂದರು.