ಗೆಲುವಿಗೆ ಆಶೀರ್ವಾದವಾದ ಅಸಿಂಧು ಮತ: ಚೀಟಿ ಮೂಲಕ ಗೆಲುವು

Advertisement

ಬಾಗಲಕೋಟೆ: ಅಧ್ಯಕ್ಷ ಸ್ಥಾನ ಗೆಲುವಿಗೆ ಅಸಿಂಧು ಮತ ಆಶೀರ್ವಾದವಾದರೆ, ಚೀಟಿ ಎತ್ತುವ ಮೂಲಕ ಉಪಾಧ್ಯಕ್ಷ ಸ್ಥಾನದ ಅದೃಷ್ಟ ಒಲಿದ ಘಟನೆ ನಡೆಯಿತು.
ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಯಲ್ಲಟ್ಟಿ ಗ್ರಾಮ ಪಂಚಾಯಿತಿಗೆ ಎರಡನೇ ಅವಧಿಗೆ ನಡೆದ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಈ ಅದೃಷ್ಠ ಪರೀಕ್ಷೆ ನಡೆಯುವಲ್ಲಿ ಕಾರಣವಾಗಿ, ಕೊನೆಯವರೆಗೂ ಕುತೂಹಲಕಾರಿಯಾಗಿತ್ತು.
14 ಸದಸ್ಯರನ್ನೊಳಗೊಂಡ ಗ್ರಾಮ ಪಂಚಾಯಿತಿಗೆ ಕಾಂಗ್ರೆಸ್ ಹಾಗು ಬಿಜೆಪಿ ಬೆಂಬಲಿತ ಸದಸ್ಯರು ತಲಾ 7 ಜನರಿದ್ದರು. ಅದರಲ್ಲಿ ಮೊದಲಿಗೆ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಮಹಾದೇವ ಮೋಪಗಾರ ಅವರಿಗೆ 7 ಮತಗಳು ಬಂದು, 6 ಮತ ಬಿಜೆಪಿ ಬೆಂಬಲಿತ ಮಹಾಂತೇಶ ಮಾಳಗೌಡರಿಗೆ ಒಲಿದು 1 ಅಸಿಂಧು ಮತವಾಗಲು ಕಾರಣವಾಯಿತು. ಅದರಂತೆ ಉಪಾಧ್ಯಕ್ಷ ಸ್ಥಾನಕ್ಕೆ ಶ್ರೀಶೈಲ ಸಂತಿ ಹಾಗು ಗಂಗಯ್ಯ ಮಠಪತಿ ವಿರುದ್ಧ ಸಮಬಲ ಸಾಧಿಸುವಲ್ಲಿ ಕಾರಣವಾಗಿ ಕೊನೆಗೆ ಚೀಟಿ ಎತ್ತುವ ಮೂಲಕ ಬಿಜೆಪಿ ಬೆಂಬಲಿತ ಶ್ರೀಶೈಲ ಸಂತಿ ಉಪಾಧ್ಯಕ್ಷ ಸ್ಥಾನ ಪಡೆಯುವಲ್ಲಿ ಯಶಸ್ವಿಯಾದರು.