ಗೌನ್ ಗದ್ದಲಕ್ಕೆ ಪಾಲಿಕೆ ಸಾಮಾನ್ಯ ಸಭೆ ಬಲಿ

HDMC
????????????????????????????????????
Advertisement

ಹುಬ್ಬಳ್ಳಿ: ಮೇಯರ್ ಗೌನ್' ವಿಷಯ ಶುಕ್ರವಾರದ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯನ್ನು ಆಹುತಿ ಪಡೆಯಿತು. ಈ ವಿಷಯವಾಗಿ ಭಾರೀ ಕೋಲಾಹಲ ಹಾಗೂ ಹೈಡ್ರಾಮಾ ನಡೆದವು. ಭ್ರಷ್ಟಾಚಾರ, ಟೆಂಡರ್ ಅಕ್ರಮ ಇತ್ಯಾದಿ ವಿಷಯಾಧಾರಿತ ಅಂಶಗಳು ಪ್ರಸಕ್ತ ಸಭೆಯಲ್ಲಿ ಗದ್ದಲ ಎಬ್ಬಿಸುತ್ತವೆಂಬುದು ನಿರೀಕ್ಷಿತವಾಗಿತ್ತು. ಆದರೆ ಮೇಯರ್ ಗೌನ್ ತೊಡದ ಒಂದೇ ಕಾರಣಕ್ಕೆ ಸಭೆ ಬಲಿಯಾದೀತೆಂಬ ಊಹೆ ಇರಲಿಲ್ಲ.ನಾ ಗೌನ್ ತೊಡೆ; ನೀ ಬಿಡೆ’ ಎನ್ನುವುದೇ ಪ್ರಧಾನವಾಗಿ ಜ್ವಲಂತ ಸಮಸ್ಯೆಗಳು ಮುಂದಿನ ಸಾಮಾನ್ಯ ಸಭೆಯವರೆಗೆ ಕಾಯುತ್ತಲೇ ಕೂರುವಂತಾಯಿತು.
ನಡೆದದ್ದು ಏನು?: ಮೊದಲೇ ಘೋಷಿಸಿದ್ದಂತೆ ಮೇಯರ್ ಈರೇಶ ಅಂಚಟಗೇರಿ ಗೌನ್ ಧರಿಸದೇ ಮೇಯರ್ ಪೀಠಕ್ಕೆ ಆಗಮಿಸಿದರು. ತೀವ್ರವಾಗಿ ಪ್ರತಿಭಟಿಸಿದ ಪ್ರತಿಪಕ್ಷ ಕಾಂಗ್ರೆಸ್, ಗೌನ್ ಧರಿಸದೇ ಸಭೆ ನಡೆಸುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿಯಿತು. ಆಗ ಮೇಯರ್ ಸಭೆಯನ್ನು ಕೆಲಕಾಲ ಮುಂದೂಡಿದರು. ಕಾಂಗ್ರೆಸ್ ಸದಸ್ಯರು ಮೇಯರ್ ಎದುರಿನ ಖಾಲಿ ಸ್ಥಳದಲ್ಲಿ ಕುಳಿತು ಬೇಕೇ ಬೇಕು ಗೌನ್ ಬೇಕು; ಎಲ್ಲಿಯವರೆಗೆ ಹೋರಾಟ ಗೌನ್‌ವರೆಗೆ ಹೋರಾಟ' ಎಂಬ ಘೋಷಣೆಗಳನ್ನು ಕೂಗಲಾರಂಭಿಸಿದರು. ಪುನಃ ಸಭೆ ಸೇರಿದಾಗಲೂ ಕಾಂಗ್ರೆಸ್ ತನ್ನ ಪ್ರತಿಭಟನೆಯನ್ನು ಮುಂದುವರಿಸಿತ್ತು. ಬ್ರಿಟಿಷ್ ಗುಲಾಮಗಿರಿಯ ಸಂಕೇತವಾಗಿರುವ ಗೌನ್ ಧರಿಸಲ್ಲ ಎಂದು ಮೇಯರ್ ಪ್ರತಿಪಟ್ಟು ಹಿಡಿದರು.ಇದು ಪೀಠಕ್ಕೆ ಅಗೌರವ’ ಎಂದಿತು ಕಾಂಗ್ರೆಸ್. ಈ ಹಂತದಲ್ಲಿ ಮೇಯರ್ ಹಾಗೂ ವಿಪಕ್ಷದ ಸದಸ್ಯರ ನಡುವೆ ಮಾತಿನ ಸಂಘರ್ಷ ನಡೆಯಿತು.
ಸಭಾನಾಯಕ ತಿಪ್ಪಣ್ಣ ಮಜ್ಜಗಿ ವಿಪಕ್ಷಕ್ಕೆ ಮನವರಿಕೆ ಮಾಡಿಕೊಡುವ ವಿಫಲ ಯತ್ನ ಮಾಡಿದರು. ಆಡಳಿತ ಪಕ್ಷದ ಸದಸ್ಯರು ಮೂಕಪ್ರೇಕ್ಷಕರಾಗಿದ್ದರು. ನೀವೂ ಮಾಜಿ ಮೇಯರ್. ಗೌನ್ ಇಲ್ಲದೇ ಸಾಮಾನ್ಯ ಸಭೆ ನಡೆಸಬಹುದೇ ಎಂಬುದಾಗಿ ಹೇಳಿ' ಎಂದು ಕಾಂಗ್ರೆಸ್‌ನ ಕೆಲವು ಸದಸ್ಯರು ವೀರಣ್ಣ ಸವಡಿಯವರನ್ನು ಕೆಣಕಿದ್ದು ಗಮನ ಸೆಳೆಯಿತು. ಗದ್ದಲದ ನಡುವೆ ಕಾಂಗ್ರೆಸ್‌ನ ನಿರಂಜನ ಹಿರೇಮಠ ಮೇಯರ್ ಟೇಬಲ್ ಮೇಲಿನಬೆಲ್’ ಕಿತ್ತುಕೊಂಡಿದ್ದು ಪರಸ್ಪರರ ನಡುವೆ ವಾಗ್ವಾದ ಇನ್ನಷ್ಟು ಬಿರುಸಾಗುವಂತೆ ಮಾಡಿತು. ಕಲಾಪ ನಡೆಸುವುದು ಅಸಾಧ್ಯವಾದದ್ದರಿಂದ ಮೇಯರ್ ಅಂಚಟಗೇರಿ ಸಭೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು.

HDMC
????????????????????????????????????