ಗ್ರಾಮಕ್ಕೆ ಬಂದಾಗ ನನ್ನ ಬಾಲ್ಯದ ನೆನಪಾಗುತ್ತದೆ

Advertisement

ಶಿಗ್ಗಾಂವಿ (ಹಾವೇರಿ): ಗ್ರಾಮಕ್ಕೆ ಬಂದಾಗೊಮ್ಮೆ ನನ್ನ ಬಾಲ್ಯದ ನೆನಪಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಶಿಗ್ಗಾಂವಿ ತಾಲೂಕಿನ ದುಂಡಸಿ ಗ್ರಾಮದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಇಂಜಿನೀಯರಿಂಗ್ ಘಟಕದ ಸಹೋಗದೊಂದಿಗೆ ನೂತನ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡದ ಉದ್ಘಾಟನೆ ನೇರವೆರಿಸಿ ಮಾತನಾಡಿರುವ ಅವರು.
ಗ್ರಾಮಕ್ಕೆ ಬಂದಾಗೊಮ್ಮೆ ನನ್ನ ಬಾಲ್ಯದ ನೆನಪಾಗುತ್ತದೆ ಆ ಸಂದರ್ಭದಲ್ಲಿ ಕಾಡಿನ ನಡುವೆ ಇದ್ದ ಗ್ರಾಮ ದುಂಡಸಿ, ೧ ಕೋಟಿ ೮೦ ಲಕ್ಷ ಅನುದಾನದಲ್ಲಿ ನಿರ್ಮಾಣವಾದ ಕಟ್ಟಡ ಪ್ರಾಥಮಿಕ ಆರೋಗ್ಯ ಕೇಂದ್ರ, ಆಸ್ಪತ್ರೆಗೆ ಬೇಕಾಗಿರುವ ಸೌಲಭ್ಯಗಳನ್ನು ಒದಗಿಸುವುದಾಗಿ ತಿಳಿಸಿದರು. ೪೩೮ ಕೋಟಿ ಅನುದಾನದಲ್ಲಿ ತುಂಗಭದ್ರಾ ನದಿಯಿಂದ ಶಿಗ್ಗಾವಿ ಸವಣೂರು ಕ್ಷೇತ್ರದ ಗ್ರಾಮಗಳಿಗೆ ಜಲ ಜೀವನ ಯೋಜನೆ ಮೂಲಕ ಕುಡಿಯುವ ನೀರು ಒದಗಿಸು ಯೋಜನೆ ಪ್ರಾರಂಭವಾಗಿದೆ.
ಗ್ರಾಮಕ್ಕೆ ಸರಕಾರಿ ಪ್ರೌಢಶಾಲೆಯ ಮಂಜೂರು ಮಾಡುವ ಭರವಸೆ ನೀಡಿ, ಅರಟಾಳ ಗ್ರಾಮದಲ್ಲಿ ಅರಟಾಳ ರುದ್ರಗೌಡ ಹೆಸರಲ್ಲಿ ಹೆಣ್ಣು ಮಕ್ಕಳಿಗೆ ಪ್ರೌಢಶಾಲೆಯನ್ನು ಪ್ರಾರಂಭ ಮಾಡಲಾಗುವುದು ಎಂದರು.