ಗ್ರಾಮವೆಲ್ಲಾ ಪಗಡೆಮಯ ರಾಜ್ಯ ಮಟ್ಟದ ಪಗಡಿಯಾಟ

PAGDE
Advertisement

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಜಗದಾಳ ಗ್ರಾಮದಲ್ಲಿ ಬ್ರಹ್ಮದೇವರ ಜಾತ್ರೆ ನಿಮಿತ್ಯ ರಾಜ್ಯಮಟ್ಟದ ಹಗಲು ರಾತ್ರಿ ಪಗಡೆ ಪಂದ್ಯಾವಳಿಗಳು ನಡೆದು ಇಡೀ ಗ್ರಾಮವೇ ಪಗಡೆಮಯವಾಗಿ ಪರಿವರ್ತನೆಗೊಂಡು ಪಗಡೆ ಪಂದ್ಯಗಳು ಸಾವಿರಾರು ಜನರನ್ನು ಆಕರ್ಷಿಸುವಲ್ಲಿ ಕಾರಣವಾಯಿತು. ಪಗಡೆ ಎಂದ ಕೂಡಲೇ ನೆನಪಾಗುವುದು ಮಹಾಭಾರತದಲ್ಲಿ ಶಕುನಿ ಹಾಗೂ ಪಾಂಡವರ ಪಾತ್ರಗಳು ನಮ್ಮ ಕಣ್ಣ ಮುಂದೆ ಬರುತ್ತವೆ. ಪಗಡೆಯಾಟದಿಂದ ತಮ್ಮ ಇಡೀ ಸರ್ವಸ್ವವನ್ನು ಕಳೆದುಕೊಳ್ಳುವ ಕಥೆ ಎಲ್ಲರ ಕಣ್ಮುಂದೆ ಇದೆ.
ಆದರೆ ಸಮೀಪದ ಜಾನಪದರ ಗ್ರಾಮ ಜಗದಾಳ ಗ್ರಾಮದಲ್ಲಿ ಪ್ರತಿ ವರ್ಷ ಬ್ರಹ್ಮದೇವರ ಹಬ್ಬದ ನಿಮಿತ್ಯ ರಾಜ್ಯ ಮಟ್ಟದ ಹೊನಲು ಬೆಳಕಿನ ಮುಕ್ತ ಪಗಡೆಸ್ಪರ್ಧೆಯನ್ನು ಏಪಡಿಸುವುದರ ಜೊತೆಗೆ ಅದರಲ್ಲಿ ಜಯಶಾಲಿಯಾದವರಿಗೆ ಬಹುಮಾನ ಕೂಡಾ ಕೊಡುವ ವಾಡಿಕೆ ಇದೆ.
ಕಳೆದ 28 ವರ್ಷಗಳಿಂದ ಪಗಡೆ ಆಟದ ಸ್ಪರ್ಧೆಯನ್ನು ಗ್ರಾಮದ ಹಿರಿಯರು ನಡೆಸಿಕೊಂಡು ಬಂದಿದ್ದು, ಅದು ಇಂದಿಗೂ ಮುಂದುವರೆದಿದೆ. ಇಂದು ನಡೆದ ಸ್ಪರ್ಧೆಯಲ್ಲಿ ಬಾಗಲಕೋಟ, ಬಿಜಾಪೂರ, ಗದಗ, ಬೆಳಗಾಂವ ಹಾಗೂ ಮಹಾರಾಷ್ಟç ರಾಜ್ಯದ ಸಾಂಗಲಿ, ಕೊಲ್ಲಾಪೂರ ಜಿಲ್ಲೆಗಳಿಂದ ಒಟ್ಟು 46 ತಂಡಗಳು ಆಗಮಿಸಿದ್ದವು.
ಪ್ರಥಮ ಬಹುಮಾನ ರೂ. 50,001, ದ್ವಿತೀಯ ಬಹುಮಾನ ರೂ. 30,001, ತೃತೀಯ ಬಹುಮಾನ್ ರೂ. 20,001, ಚತುರ್ಥ ಬಹುಮಾನ್ ರೂ. 10,001 ಸೇರಿದಂತೆ 8 ಬಹುಮಾನಗಳನ್ನು ವಿಜೇತರಿಗೆ ನೀಡಲಾಯಿತು.
ಬಾರಿ ಕೂತುಹಲ ಮೂಡಿಸಿದ್ದ ಪ್ರತಿ ಪಂದ್ಯಗಳು ನೋಡುಗರ ಕಣ್ಮಣ ಸೆಳೆದವು. ಗ್ರಾಮೀಣ ಕ್ರೀಡೆಯಾಗಿರುವ ಪಗಡೆ ಈಗಲೂ ಕೂಡಾ ಇಂತಹ ಹಳ್ಳಿಗಳಲ್ಲಿ ತನ್ನದೇ ಆದ ಅಸ್ಥಿತ್ವವನ್ನು ಉಳಿಸಿಕೊಂಡು ಹೊರಟಿದ್ದು ಅದಕ್ಕೆ ಜಗದಾಳ ಗ್ರಾಮದ ಬ್ರಹ್ಮದೇವರ ಹಬ್ಬದ ಜಾತ್ರಾ ಕಮೀಟಿ ಕೂಡಾ ಟೊಂಕಕಟ್ಟಿ ನಿಂತಿದೆ.