ಚಂದ್ರಯಾನ-3: ಆಗಸ್ಟ್‌ 23ರ ಸಂಜೆ ಚಂದ್ರನ ಅಂಗಳಕ್ಕೆ

Advertisement

ಭಾರತದ ಚಂದ್ರಯಾನ-3 ಯೋಜನೆ ಯಶಸ್ವಿಯಾಗಲು ಇನ್ನೊಂದು ಘಟ್ಟ ಬಾಕಿ ಉಳಿದಿದ್ದು, ಚಂದಮಾಮನ ಅಂಗಳಕ್ಕೆ ಇಳಿಯಲು ದಿನಾಂಕ ಮತ್ತು ಸಮಯವನ್ನು ಇಸ್ರೋ ಘೋಷಿಸಿದೆ.
ಇಸ್ರೋ ಪ್ರಕಾರ, ಬಾಹ್ಯಾಕಾಶ ನೌಕೆಯ ಲ್ಯಾಂಡರ್ ಮಾಡ್ಯೂಲ್ ‘ವಿಕ್ರಮ್’ ಅನ್ನು ಚಂದ್ರನ ಹತ್ತಿರ ತರುವ ಮೂಲಕ ಎರಡನೇ ಮತ್ತು ಅಂತಿಮ ಡಿ-ಬೂಸ್ಟಿಂಗ್ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ ಎಂದು ತಿಳಿಸಿದೆ. ಡಿ-ಬೂಸ್ಟಿಂಗ್‌ನಲ್ಲಿ, ಲ್ಯಾಂಡರ್ ಮಾಡ್ಯೂಲ್‌ನ ವೇಗವನ್ನು ನಿಧಾನಗೊಳಿಸಲಾಗುತ್ತದೆ, ಇದರಿಂದ ಅದನ್ನು ಸುಲಭವಾಗಿ ಚಂದ್ರನ ಮೇಲ್ಮೈಯಲ್ಲಿ ಇಳಿಸಬಹುದು. 134 ಕಕ್ಷೆಯಲ್ಲಿ ಸುತ್ತುತ್ತಿದ್ದ ವಿಕ್ರಮ್ ಲ್ಯಾಂಡರ್ ಈಗ 25 ಕಿಮೀ ಕಕ್ಷೆಯಲ್ಲಿ ಸುತ್ತಲು ಆರಂಭಿಸಿದೆ. ಎರಡು ದಿನಗಳಲ್ಲಿ ಇದು ಚಂದ್ರನ ದಕ್ಷಿಣ ಭಾಗದಲ್ಲಿ ಲ್ಯಾಂಡಿಂಗ್ ಸೂಕ್ತ ಸ್ಥಳವನ್ನು ಆಯ್ಕೆ ಮಾಡಿಕೊಂಡು ಆಗಸ್ಟ್ 23 ರಂದು ಸಂಜೆ ಆರು ಗಂಟೆ ನಾಲ್ಕು ನಿಮಿಷಕ್ಕೆ ಲ್ಯಾಂಡ್ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದೆ.