ಛತ್ತೀಸಗಡದತ್ತ ಅಭಯ ಚಿತ್ತ

Advertisement

ಬೆಳಗಾವಿ: ಸಂಘ ಪರಿವಾರದ ಶಿಸ್ತನ್ನು ಮೈಗೂಡಿಸಿಕೊಂಡು ನೇರ ನುಡಿಗೆ ಹೆಸರಾಗಿರುವ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲರಿಗೆ ಬಿಜೆಪಿ ಹೈಕಮಾಂಡ ಮತ್ತೊಂದು ಮಹತ್ತರ ಜವಾಬ್ದಾರಿ ನೀಡಿದೆ. ಛತ್ತೀಸಗಡದ 90 ಕ್ಷೇತ್ರದಲ್ಲಿ ವಿಧಾನಸಭೆ ಚುನಾವಣೆಯ ಪೂರ್ವ ತಯಾರಿಯಲ್ಲಿ ಬಿಜೆಪಿ ಹೈಕಮಾಂಡ ಬೇರೆ ಬೇರೆ ರಾಜ್ಯದ ಸಂಘಟನಾ ಚತುರ ಶಾಸಕರನ್ನು ನೇಮಕ ಮಾಡಿದೆ.
ಗಮನಿಸಬೇಕಾದ ಸಂಗತಿ ಎಂದರೆ, ಆ‌ 90 ಜನ ಶಾಸಕರಲ್ಲಿ ಕರ್ನಾಟಕದಿಂದ ಅಭಯ ಪಾಟೀಲ ಒಬ್ಬರೇ ಎನ್ನುವುದು ವಿಶೇಷ. ಈ ಪ್ರದೇಶದಲ್ಲಿ ಸಂಘಟನಾ ಚತುರ ಶಾಸಕರಿಗೆ ಹೈ ಕಮಾಂಡ್ ಕೆಲವೊಂದು ಜವಾಬ್ದಾರಿ ನೀಡಿದೆ. ಕಿರಿಯರಲ್ಲಿ ಹಿರಿಯ ಎನಿಸಿಕೊಂಡು ಸಂಘಟನೆಯಲ್ಲಿ ಶಿಸ್ತನ್ನು ಮೈಗೂಡಿಸಿಕೊಂಡಿರುವ ಅಭಯ ಪಾಟೀಲರಿಗೆ ಕೋ ಆರ್ಡಿನೇಟರ್ ಜವಾಬ್ದಾರಿಯನ್ನು ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಕಳೆದ ಹಲವು ದಿನಗಳಿಂದ ಅಭಯ ಪಾಟೀಲರು ಆ ಪ್ರದೇಶದಲ್ಲಿಯೇ ಇದ್ದು ಚುನಾವಣೆ ಪೂರ್ವ ತಯಾರಿಯ ಕೆಲಸದಲ್ಲಿ ಬ್ಯುಜಿಯಾಗಿದ್ದಾರೆ.
ಈ ಚುನಾವಣೆ ಪೂರ್ವಭಾವಿ ತಯಾರಿಗೆ ಬೇರೆ ಬೇರೆ ರಾಜ್ಯದ 90 ಶಾಸಕರನ್ನು ಬಿಜೆಪಿ ನೇಮಕ ಮಾಡಿದೆ. ಓರಿಸ್ಸಾ, ಜಾರ್ಖಂಡ, ಆಸ್ಸಾಂ, ವೆಸ್ಟಬೆಂಗಾಲ್ ಮತ್ತು ಬಿಹಾರ ರಾಜ್ಯದ ಸುಮಾರು 90 ಶಾಸಕರು ಚುನಾವಣೆ ಪೂರ್ವ ತಯಾರಿ ಅಭಿಯಾನದಲ್ಲಿ ಭಾಗವಹಿಸಲಿದ್ದಾರೆ ಈ‌ ಹಿಂದೆ ಗೋವಾ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆದ ಸಂದರ್ಭದಲ್ಲಿ ಕೂಡ ಅಭಯ ಪಾಟೀಲರನ್ನು ಬಿಜೆಪಿಯು ಚುನಾವಣೆ ಉಸ್ತುವಾರಿ ಕೊಟ್ಟಿತ್ತು.‌ ಆಗ ಕೊಟ್ಟ ಜವಾಬ್ದಾರಿಯನ್ನು ಅಭಯ ಪಾಟೀಲರು ಸಮರ್ಥವಾಗಿ ನಿಭಾಯಿಸಿದ್ದರು. ನಂತರ ವಿಜಯಪುರ‌ ಮಹಾನಗರ ಪಾಲಿಕೆ ಕೂಡ ಅಭಯ ಪಾಟೀಲರಿಗೆ ಪಕ್ಷ ಒಂದಿಷ್ಟು ಜವಾಬ್ದಾರಿ ಕೊಟ್ಟಿತ್ತು. ಈ ಎಲ್ಲವನ್ನು ಗಮನಿಸಿದ ಬಿಜೆಪಿ ಹೈಕಮಾಡ ಈಗ ಅವರನ್ನು ಛತ್ತೀಸಗಡಕ್ಕೆ ಕರೆಯಿಸಿಕೊಂಡಿದೆ.