ಜನಸಂಖ್ಯೆ ಶಾಪ `ಅಲ್ಲ’ವೆಂದು ನಿರೂಪಿಸಬೇಕಿದೆ

ಗುರುಬೋಧೆ
Advertisement

ಭಾತರ ದೇಶ ಜನಸಂಖ್ಯೆಯಲ್ಲಿ ಜಗತ್ತಿಗೆ ಮೊದಲನೇ ಸ್ಥಾನದಲ್ಲಿದೆ ಜನಸಂಖ್ಯೆ ಹೆಚ್ಚಾದಂತೆಲ್ಲಾ ಮೂಲ ಸೌಕರ್ಯಗಳ ಹೆಚ್ಚಳವಾಗಬೇಕು ಅಗತ್ಯ ಆಹಾರ, ನೀರು, ಕಾನೂನು ಸುವ್ಯವಸ್ಥೆ, ಶಿಕ್ಷಣ ಆರೋಗ್ಯ ಹೀಗೆ ಹತ್ತು ಹಲವು ವ್ಯವಸ್ಥೆಗಳನ್ನು ಕೈಗೊಳ್ಳುವುದು ಸರ್ಕಾರಗಳಿಗೆ ಸವಾಲಾಗುತ್ತದೆ. ಜನಸಂಖ್ಯೆ ಸ್ಫೋಟಗೊಂಡರೆ ಕೊಲೆ, ಸುಲಿಗೆ, ಆಹಾರ, ನೀರಿಗಾಗಿ ಹಾಹಾಕಾರ ಉಂಟಾಗುವ ಅಪಾಯವಿರುತ್ತದೆ ತಜ್ಞರು ಎಚ್ಚರಿಸುತ್ತಾ ಬಂದಿದ್ದಾರೆ. ಆದರೂ ಭಾರತ ಈಗ ಜನಸಂಖ್ಯೆಯಲ್ಲಿ ನಂಬರ್ ಒನ್ ಸ್ಥಾನಕ್ಕೇರಿದೆ. ಸದ್ಯಕ್ಕೆ ದೇಶದಲ್ಲಿ ಯುವಜನರ ಸಂಖ್ಯೆ ಹೆಚ್ಚಾಗಿದೆ ಇದರಿಂದಾಗಿ ಆರ್ಥಿಕ ಸ್ಥಿತಿಗೆ ಇದೊಂದು ರೀತಿಯಲ್ಲಿ ವರವಾಗಲಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹಿಂದಿನ ಕಾಲದಲ್ಲಿ ಒಂದು ಮಾತು ಚಾಲ್ತಿಯಲ್ಲಿತ್ತು “ಮಕ್ಕಳು ಉಂಡರೆ ಕೇಡಲ್ಲ ಮಳೆ ಬಂದರೆ ಕೇಡಲ್ಲ” ಎಂಬ ಮಾತು ರೂಢಿಗತವಾಗಿತ್ತು, ಆದರೆ ಪ್ರಸ್ತುತ ಕಾಲಘಟ್ಟದಲ್ಲಿ ಕಾಲ-ಕಾಲಕ್ಕೆ ಮಳೆ ಬೆಳೆಯಾಗುತ್ತಿಲ್ಲ. ಯುವ ಜನಾಂಗ ಅನಗತ್ಯ ವಿಷಯಗಳಲ್ಲಿ ಅತ್ಯಾಸಕ್ತಿ ತೆಳೆದಿರುವುದರಿಂದ ಮೇಲಿನ ಗಾದೆ ಮಾತಿನ ಸತ್ಯಾಸತ್ಯತೆಯನ್ನು ಮರುಪರಿಶೀಲಿಸಬೇಕಾದ ಕಾಲ ಸನ್ನಿಹಿತವಾಗಿದೆ ಎಂಬುದು ನಮ್ಮ ಭಾವನೆ ಯುವಜನರಿರುವ ದೇಶ ಮಾನವ ಸಂಪನ್ಮೂಲ ಹೊಂದಿದ ಹಾಗೂ ಅತಿ ಹೆಚ್ಚು ದುಡಿಯುವ ವರ್ಗವನ್ನು ಹೊಂದಿರುವ ದೇಶವಾಗಿರುವುದರಿಂದ ಇಡೀ ಜಗತ್ತು ಭಾರತದ ಕಡೆ ತಿರುಗಿ ನೋಡುವಂತಾಗುತ್ತದೆ. ಆದುದರಿಂದ ಏರಿಕೆಯಾದ ಜನಸಂಖ್ಯೆಯ ಕುರಿತು ಆತಂಕಿಸುವ ಅಗತ್ಯವಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಯುವಜನರಿಗೆ ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ಹಾದಿ ತಪ್ಪದಂತೆ ನೈತಿಕ ಶಿಕ್ಷಣವನ್ನು ನೀಡಬೇಕಾಗುತ್ತದೆ. ಹೀಗಾದಾಗ ಮಾತ್ರ ಯುವಜನಾಂಗ ರಾಷ್ಟ್ರಕ್ಕೆ ಪೂರಕವಾಗುತ್ತದೆ. ಯುವಜನರಿಗೆ ಸರಿದಾರಿಯಲ್ಲಿ ಸಾಗುವಂತೆ ಮಾಡಬೇಕಾದ ಪ್ರೇರಕ ಶಕ್ತಿಯ ಅಗತ್ಯವಿದೆ ಇದಕ್ಕೆ ಸರ್ಕಾರಗಳು, ಶಿಕ್ಷಣ ತಜ್ಞರು, ಧಾರ್ಮಿಕ ನೇತಾರರು ದೇಶದ ಪ್ರಜ್ಞಾವಂತರು ಅಹರ್ನಿಸಿ ದುಡಿಯಬೇಕಾಗಿದೆ. ಏಕೆಂದರೆ, ನೆರೆಯ ರಾಷ್ಟ್ರ ಚೀನಾ ಕ್ವಾಂಟಿಟಿ ಮುಖ್ಯವಲ್ಲ ಕ್ವಾಲಿಟಿ ಮುಖ್ಯ ಎಂದು ಟೀಕಿಸಿದೆ. ಶತ್ರುದೇಶ ಇಡೀ ಜಗತ್ತಿಗೆ ಮಾರ್ಗದರ್ಶನ ಮಾಡುತ್ತಾ ಬಂದಿರುವ ದೇಶದ ಗೌರವನ್ನು ಕಾಪಾಡುವ ಹೊಣೆಗಾರಿಕೆಯನ್ನು ರಾಷ್ಟ್ರದ ಯುವಜನತೆ ಹೊರಬೇಕಿದೆ ಸನ್ಮಾರ್ಗದಲ್ಲಿ ಸಾಗಿ ಕುಟುಂಬ, ಸಮಾಜ, ರಾಷ್ಟ್ರದ ಗೌರವವನ್ನು ಕಾಪಾಡಿ ಜನಸಂಖ್ಯೆ ಶಾಪವಲ್ಲ, ವರ ಎಂಬುದನ್ನು ರುಜುವಾತು ಪಡಿಸಬೇಕಿದೆ.