ಜಮೀನು ವ್ಯಾಜ್ಯ: ಉರಗ ರಕ್ಷಕ ಪರಶುರಾಮ ಹತ್ಯೆ

Advertisement

ಹಳಿಯಾಳ: ಹಳಿಯಾಳ ಅರಣ್ಯ ವಿಭಾಗದ ದಿನಗೂಲಿ ನೌಕರ, ಹವ್ಯಾಸಿ ಉರಗ ಸಂರಕ್ಷಕ ಸ್ನೇಕ್ ಪರಶು ಎಂದೇ ಚಿರಪರಿಚಿತರಾದ ಪರಶುರಾಮ ನಾರಾಯಣ ತೋರಸ್ಕರ ಅವರನ್ನು ತಾಲೂಕಿನ ಕರ್ಲಕಟ್ಟಾ ಗ್ರಾಮ ವ್ಯಾಪ್ತಿಯಲ್ಲಿ ಬರುವ ಹೊಲದಲ್ಲಿ ಎರಡೂ ಕಾಲುಗಳನ್ನು ಕಡಿದು ಭೀಕರವಾಗಿ ಕೊಲೆ ಮಾಡಿದ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.
ಈ ಕೊಲೆಗೆ ಕೃಷಿ ಜಮೀನಿನ ವ್ಯಾಜ್ಯವೇ ಮೂಲ ಕಾರಣವೆಂದು ಹೇಳಲಾಗುತ್ತಿದೆ. ಕರ್ಲಕಟ್ಟಾ ಗ್ರಾಮದಲ್ಲಿ ಮೂರು ಎಕರೆ ಕೃಷಿ ಜಮೀನಿಗೆ ಸಂಬAಧಿಸಿದAತೆ ಕೊಲೆಯಾದ ಪರಶುರಾಮ ತೋರಸ್ಕರ ಹಾಗೂ ಸಹದೇವ ಹನುಮಂತ ದಡ್ಡಿಕರ ಎಂಬವರ ಮಧ್ಯೆ ವ್ಯಾಜ್ಯ ಆರಂಭಗೊAಡಿತ್ತು. ಈ ಜಮೀನು ವ್ಯಾಜ್ಯದ ವಿಚಾರಣೆಯು ನ್ಯಾಯಾಲಯದಲ್ಲಿ ನಡೆಯುತ್ತಿತ್ತು. ಹೀಗಿರುವಾಗ ಗುರುವಾರ ಈ ವಿವಾದಿತ ಕೃಷಿ ಜಮೀನಿನಲ್ಲಿಯೇ ಪರಶುರಾಮ ಅವರನ್ನು ಕೊಲೆ ಮಾಡಲಾಗಿದೆ. ಈ ಪ್ರಕರಣದ ಕುರಿತು ಮೃತರ ತಮ್ಮ ತುಕಾರಾಮ ನಾರಾಯಣ ತೋರಸ್ಕರ ಹಳಿಯಾಳ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಎಸ್‌ಪಿ ಭೇಟಿ: ಹಳಿಯಾಳ ಠಾಣೆಗೆ ಎಸ್‌ಪಿವಿಷ್ಣುವರ್ದನ ಎಸ್. ಅವರು ಸಂಜೆ ಭೇಟಿ ನೀಡಿ ಪ್ರಕರಣದ ವಿಚಾರಣೆ ನಡೆಸಿ, ಪೊಲೀಸ್ ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿದ್ದಾರೆ. ದಾಂಡೇಲಿ ಡಿವೈಎಸ್ಪಿ ಶಿವಾನಂದ ಕಟಗಿ ಮಾರ್ಗದರ್ಶನದಲ್ಲಿ ಹಳಿಯಾಳ ಸಿಪಿಐ ಸುರೇಶ ಶಿಂಗಿಯವರು ಮುಂದಾಳತ್ವದಲ್ಲಿ ಪಿಎಸೈ ವಿನೋದ ರೆಡ್ಡಿ, ಅಪರಾಧ ವಿಭಾಗದ ಪಿಎಸೈ ಅಮೀತ ಅತ್ತಾರ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ತಂಡವು ಆರೋಪಿಗಳನ್ನು ಹಿಡಿಯಲು ಬಲೆ ಬೀಸಿದ್ದಾರೆ.