ಜಾನಪದ ಗಾಯನ ನಿಲ್ಲಿಸಿದ ಗುರುರಾಜ ಕೆಂಧೂಳಿ

Advertisement

ಯಾಕ ತಂಗಿ ಇಷ್್ಯಾಕ ಸೊರಗಿದಿ…, ಹೆಂಡತಿ ಅಂದರ ನಗುತಾನ… ಹೀಗೆ ಸಾವಿರಾರು ಜಾನಪದ ಗೀತೆಗಳನ್ನು ಹಾಡಿ ಲಕ್ಷಾಂತರ ಜನರ ಮನಗೆದ್ದ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿಯ ಖ್ಯಾತ ಗಾಯಕ ಗುರುರಾಜ ಕೆಂಧೂಳಿ(72) ಸೋಮವಾರದಂದು ನಿಧನರಾದರು.

1951 ರಲ್ಲಿ ಬಡಕುಟುಂಬದಲ್ಲಿ ಜನಿಸಿದ ಗುರುರಾಜ ಕೆಂಧೂಳಿ ಹುಟ್ಟಿನಿಂದಲೇ ಜನಪದ ಕಲೆ ಮೈಗೂಡಿಸಿಕೊಂಡು ಬೆಳೆದವರು. ಕ್ಯಾಸೆಟ್‌ಗಳ ಕಾಲವಾಗಿದ್ದ 1985 ರಲ್ಲಿ `ಯಾಕ ತಂಗಿ ಇಷ್ಟಾö್ಯಕ ಸೊರಗಿದಿ’ ಎಂಬ ಜಾನಪದ ಗೀತೆ ರಾಜ್ಯದೆಲ್ಲೆಡೆ ಪಸರಿಸಿಕೊಂಡು ಮನೆಮಾತಾದರು. ಮರು ವರ್ಷವೇ ಹೆಂಡತಿ ಅಂದರ ನಗುತಾನ.. ಎಂಬ ಗೀತೆಯೆಂದಿಗೆ ತನ್ನ ಜನಪ್ರಿಯತೆ ಇಮ್ಮಡಿಗೊಳಿಸಿಕೊಂಡು ಸಾವಿರಾರು ಹಾಡುಗಳಿಗೆ ಸಾಕ್ಷಿಯಾಗಿದ್ದರು. ಮುಗಳಖೋಡದ ಯಲ್ಲಾಲಿಂಗ ಮಹಾಸ್ವಾಮಿ, ಶ್ರೀ ಕಾಡಸಿದ್ಧೇಶ್ವರ ದೇವರ ಹಾಗು ಮಲ್ಲಯ್ಯನ ಕಂಬಿಗಳ ಹಾಡುಗಳ ಮೂಲಕ ಪ್ರಸಿದ್ಧಿ ಪಡೆದಿದ್ದ ಇವರು ಸಿಡಿ ಹಾಗು ಕ್ಯಾಸೆಟ್‌ಗಳಿಂದ ಜನರ ಮನ ತಣಿಸುವಲ್ಲಿ ಮನೆಮಾತಾಗಿದ್ದು, ಇದೀಗ ಇಹಲೋಕ ತ್ಯಜಿಸಿದ್ದು, ಅಪಾರ ಸಂಖ್ಯೆ ಅಭಿಮಾನಿಗಳ ಮನದಲ್ಲಿ ನೀರವ ಮೌನ ತುಂಬಿದೆ.
ಇವರಿಗೆ ಪತ್ನಿ, ಇಬ್ಬರು ಪುತ್ರರು ಹಾಗು ಓರ್ವ ಪುತ್ರಿ ಇದ್ದಾರೆ.