ಮಹಮ್ಮದ್ ಅಲಿ ಜಿನ್ನಾ ಮತ್ತು ಸಾವರ್ಕರ್ ಇಬ್ಬರೂ ಒಂದೇ. ಇವರಿಂದಲೇ ದೇಶ ಈ ಸ್ಥಿತಿಗೆ ಬಂದಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಹೇಳಿದರು.
ಚಾಮರಾಜನಗರದಲ್ಲಿ ಮಾತನಾಡಿದ ಅವರು, ವೀರ್ ಸಾವರ್ಕರ್ ಓರ್ವ ನಾಸ್ತಿಕ, ಜಿನ್ನಾ ಕೂಡ ನಾಸ್ತಿಕರೇ, ಅವರಿಬ್ಬರೂ ನಾಸ್ತಿಕರು ಸೇರಿ ದೇಶವನ್ನು ಈ ಸ್ಥಿತಿಗೆ ತಂದಿಟ್ಟಿದ್ದಾರೆ. ಇಂತಹ ಸಾವರ್ಕರ ಭಾವಚಿತ್ರವನ್ನು ಗಣೇಶೋತ್ಸವದಲ್ಲಿ ಇರಿಸಲು ಹೊರಟಿದ್ದಾರೆ. ನಾಸ್ತಿಕರನ್ನು ತೆಗೆದುಕೊಂಡು ಹೋಗಿ ನಂಬಿಕಸ್ಥರ ಜಾಗದಲ್ಲಿ ಇಡುವುದು ಹಾಸ್ಯಾಸ್ಪದವಾಗಿದೆ ಎಂದರು.