ಜಿಲ್ಲೆಯಲ್ಲಿ ಶೇ40 ಕಮಿಷನ್ ದಂಧೆ ಅವ್ಯಾಹತ: ಎಸ್ಸೆಸ್ಸೆಂ ಆರೋಪ

ಎಸ್ಸೆಸ್ಸೆಂ
Advertisement

ದಾವಣಗೆರೆ: ರಾಜ್ಯದ ಬಿಜೆಪಿ ಸರ್ಕಾರದ ಬೆಲೆ ಏರಿಕೆ, 40 ಪರ್ಸೆಂಟ್ ಕಮಿಷನ್ ದಂಧೆಯ ವಿರುದ್ಧ ಕಾಂಗ್ರೆಸ್‌ನಿಂದ ಭಾರತ್ ಜೋಡೋ -ಸಂವಿಧಾನ ಬಚಾವೋ ಪಾದಯಾತ್ರೆ ಹಮ್ಮಿಕೊಂಡಿರುವುದಾಗಿ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದರು.
ನಗರದ ಅಂಬೇಡ್ಕರ್ ವೃತ್ತದಲ್ಲಿ ಭಾರತ್ ಜೋಡೋ -ಸಂವಿಧಾನ ಬಚಾವೋ ಪಾದಯಾತ್ರೆಗೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರಗಳು ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ ಹೆಚ್ಚಳದಿಂದ ಜನಸಾಮಾನ್ಯರು ಬದುಕು ನಡೆಸಲು ಆಗದಂತ ದಿನಗಳನ್ನು ತಂದೊಡ್ಡಿವೆ. ಮುಖ್ಯವಾಗಿ ರಾಜ್ಯ, ಜಿಲ್ಲೆಯಲ್ಲಿ ೪೦ ಪರ್ಸೆಟೇಜ್ ಕಮಿಷನ್ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ಅದರಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ಇದು ಹೆಚ್ಚಾಗಿದೆ. ಮುಂದಿನ ಚುನಾವಣೆಗೆ ಜನತೆ ಬಿಜೆಪಿಗೆ ತಕ್ಕಪಾಠ ಕಲಿಸಲಿದ್ದಾರೆ ಎಂದರು.
ಚುನಾವಣೆಗೆ ಸ್ಪರ್ಧೆ ನಡೆಸಲು ಅಭ್ಯರ್ಥಿಗಳು 2 ಲಕ್ಷ ರು., ಕಟ್ಟಿ ಅರ್ಜಿ ಸಲ್ಲಿಸಬೇಕೆಂದು ಹೈಕಮಾಂಡ್ ಹೇಳಿತ್ತು. ಆದರೆ, ಪ್ರಾಮಾಣಿಕರಾಗಿರುವ ನಾವು 2 ಲಕ್ಷ ಯಾಕೆ ಕಟ್ಟಬೇಕು ಅಂತ ಅರ್ಜಿ ಸಲ್ಲಿಸಿಲ್ಲ. ಹೊರತಾಗಿ ಮತ್ತ್ಯಾವುದೇ ಕಾರಣ ಇಲ್ಲ. ನಾವು ಅರ್ಜಿ ಸಲ್ಲಿಸುತ್ತೇವೆ. 2 ಲಕ್ಷ ಕೊಡುವುದಿಲ್ಲ ಎಂದು ಮಾರ್ಮಿಕವಾಗಿ ಹೇಳಿದರು.