ಜಿಲ್ಲೆಯಾದ್ಯಂತ ಚಳಿ ಚಳಿ…. ಸಂಜೆಯಷ್ಟೊತ್ತಿಗೆ ಮುದುಡಿದ ಜನ

Advertisement

ಹುಬ್ಬಳ್ಳಿ: ಅಬ್ಬಬ್ಬಾ ಏನ್ರಿ ಚಳಿ ಇದು…. ಇದ್ದಕ್ಕಿದ್ದಂತೆಯೇ… ಮೈಗೆ ತಣ್ಣೀರು ಉಗ್ಗಿದ ಹಾಗೆ ಆಗುತ್ತಿದೆ… ಚಳಿಗಾಲ ಹೋಯ್ತು ಅಂತಾ ಸ್ವೇಟರ್, ಶಾಲು, ಮಫ್ಲರ್, ಟೋಪಿ, ಸಾಕ್ಸ್ ಎಲ್ಲಾ ತೆಗೆದಿರಿಸಿದ್ದೆವು. ಈಗ ನೋಡ್ರಿ ಹುಡುಕಿ ಹಾಕಿಕೊಂಡ್ವಿ…
ಕಳೆದ ಎರಡು ದಿನಗಳಿಂದ ಹುಬ್ಬಳ್ಳಿ-ಧಾರವಾಡ ಮಹಾನಗರ ಸೇರಿದಂತೆ ಜಿಲ್ಲೆಯಾದ್ಯಂತ ಚಳಿಗೆ ನಡುಗುತ್ತಿದ್ದಾರೆ. ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಚಳಿ ಅನುಭವಿಸುತ್ತಿದ್ದ ಜನ ಈ ಬಾರಿ ಅಷ್ಟೊಂದು ಚಳಿ ಅನುಭವಿಸಿರಲಿಲ್ಲ. ಆದರೆ, ಈಗ ಹವಾಮಾನ ವೈಫರಿತ್ಯದಿಂದ ಜನವರಿ ಎರಡನೇ ವಾರದಲ್ಲಿ ಚಳಿ ಹೆಚ್ಚಾಗಿದೆ.
ಜ.೮ರಂದು ಶುರುವಾದ ಚಳಿ ೯ರಂದು ಇನ್ನಷ್ಟು ಹೆಚ್ಚಳವಾಗಿದೆ. ಮಂಗಳವಾರದಿAದ ನಾಲ್ಕೆöÊದು ದಿನಗಳ ಕಾಲ ಚಳಿ ಹೆಚ್ಚಾಗಿರುತ್ತದೆ ಎಂದು ಹವಾಮಾನ ಇಲಾಖೆ ಮೂಲಗಳು ತಿಳಿಸಿವೆ.
ಜ.೯ರಂದು ರಾತ್ರಿ ೧೯ ಡಿಗ್ರಿ ಸೆಲ್ಸಿಯಸ್ ಇದ್ದರೆ ಮಂಗಳವಾರ ಬೆಳಗಿನ ಜಾವ ೧೩ ಡಿಗ್ರಿ ಸೆಲ್ಸಿಯಸ್ ತಲುಪಲಿದೆ ಎಂದು ಹವಾಮಾನ ಮುನ್ಸೂಚನೆ ಮೂಲಗಳು ತಿಳಿಸಿವೆ.
ಮುನ್ನೆಚ್ಚರಿಕೆ ವಹಿಸಲು ತಜ್ಞರ ಸಲಹೆ
ಇನ್ನೂ ಮರ‍್ನಾಲ್ಕು ದಿನಗಳ ಕಾಲ ಚಳಿ ಹೆಚ್ಚಾಗಿರುತ್ತದೆ. ವೃದ್ಧರು ಬೆಚ್ಚನೆಯ ಉಡುಪುಗಳನ್ನು ಧರಿಸಬೇಕು. ಹಿರಿಯರ ಆರೋಗ್ಯದ ಬಗ್ಗೆ ಕುಟುಂಬದವರು ನಿಗಾವಹಿಸಬೇಕು. ನಸುಕಿನ ಜಾವ ವಾಯುವಿಹಾರಕ್ಕೆ ತೆರುತ್ತಿದ್ದಾರೆ ಒಂದು ವಾರದ ಮಟ್ಟಿಗೆ ಹೋಗಬೇಡಿ. ಚಳಿ ಕಡಿಮೆ ಆದ ಬಳಿಕ ತೆರಳಬಹುದು. ಇದರಿಂದ ಆರೋಗ್ಯ ರಕ್ಷಣೆ ಮಾಡಿಕೊಳ್ಳಬಹುದು ಎಂದು ಕೃಷಿ ವಿವಿಯ ಹವಾಮಾನ ವಿಭಾಗದ ತಜ್ಞರಾದ ಆರ್.ಎಚ್. ಪಾಟೀಲ ತಿಳಿಸಿದ್ದಾರೆ.
ಜ.೧೨ ಮತ್ತು ೧೩ರಂದು ೧೪ರಿಂದ ೧೮ ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಜ.೧೪ರಂದು ೧೬ರಿಂದ ೧೯ ಡಿಗ್ಸಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.