ಜೋಗ ಜಲಪಾತಕ್ಕೆ ರಜಾ ದಿನಗಳಲ್ಲಿ ವಿಶೇಷ ಬಸ್ ವ್ಯವಸ್ಥೆ

Advertisement

ಹುಬ್ಬಳ್ಳಿ: ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಜಗತ್ಪ್ರಸಿದ್ದ ಜೋಗ ಜಲಪಾತವನ್ನು ವೀಕ್ಷಿಸಲು ಹುಬ್ಬಳ್ಳಿಯಿಂದ ಜುಲೈ 9ರಿಂದ ಪ್ರತಿ ಭಾನುವಾರ ಹಾಗೂ ರಜಾ ದಿನಗಳಲ್ಲಿ “ವಿಶೇಷ ರಾಜಹಂಸ” ಹಾಗೂ “ವೋಲ್ವೋ ಮಲ್ಟಿಎಕ್ಸೆಲ್” ಬಸ್ಸಿನ ವ್ಯವಸ್ಥೆ ಮಾಡಿದೆ.
ರಾಜಹಂಸ ವಾಹನವು ಭಾನುವಾರ ಹಾಗೂ ರಜಾ ದಿನಗಳಲ್ಲಿ ಬೆಳಿಗ್ಗೆ 7-45ಕ್ಕೆ ಹುಬ್ಬಳ್ಳಿ ಗೋಕುಲ ರಸ್ತೆಯ ಹೊಸ ಬಸ್ ನಿಲ್ದಾಣದಿಂದ ಹೊರಟು ಶಿರಸಿಯ ಮಾರಿಕಾಂಬಾ ದೇವಸ್ಥಾನಕ್ಕೆ ತಲುಪಿ ಶ್ರೀ ದೇವಿಯ ದರ್ಶನ ಮಾಡಿಕೊಂಡು ಅಲ್ಲಿಂದ 10-30ಕ್ಕೆ ಹೊರಟು 12ಕ್ಕೆ ಜೋಗವನ್ನು ತಲುಪಲಿದೆ. ನಂತರ ಜೋಗದಿಂದ ಸಂಜೆ 5ಕ್ಕೆ ಹೊರಟು ನೇರವಾಗಿ ರಾತ್ರಿ 9.30ಕ್ಕೆ ಹುಬ್ಬಳ್ಳಿಗೆ ತಲುಪಲಿದೆ. ಹುಬ್ಬಳ್ಳಿಯಿಂದ ಜೋಗಕ್ಕೆ ಹೋಗಿ ಬರುವ ವಾಹನದ ರಿಯಾಯಿತಿ ಪ್ರಯಾಣದ ದರ ರೂ. 430/- ನಿಗದಿಪಡಿಸಲಾಗಿದೆ ಎಂದು ತಿಳಿಸಲಾಗಿದೆ.
ವೋಲ್ವೋ ಮಲ್ಟಿಎಕ್ಸೆಲ್ ವಾಹನವು ಭಾನುವಾರ ಹಾಗೂ ರಜಾ ದಿನಗಳಲ್ಲಿ ಬೆಳಿಗ್ಗೆ 8ಗಂಟೆಗೆ ಹುಬ್ಬಳ್ಳಿ ಗೋಕುಲ ರಸ್ತೆ ಹೊಸ ಬಸ್ ನಿಲ್ದಾಣದಿಂದ ಹೊರಟು ಶಿರಸಿಯ ಮಾರಿಕಾಂಬಾ ದೇವಸ್ಥಾನಕ್ಕೆ ತಲುಪಿ ಶ್ರೀ ದೇವಿಯ ದರ್ಶನ ಮಾಡಿಕೊಂಡು ಅಲ್ಲಿಂದ 10.30ಕ್ಕೆ ಹೊರಟು 12ಕ್ಕೆ ಜೋಗವನ್ನು ತಲುಪಲಿದೆ. ನಂತರ ಜೋಗದಿಂದ ಸಂಜೆ 5ಕ್ಕೆ ಹೊರಟು ನೇರವಾಗಿ ರಾತ್ರಿ 9ಕ್ಕೆ ಹುಬ್ಬಳ್ಳಿಗೆ ತಲುಪಲಿದೆ. ಹುಬ್ಬಳ್ಳಿಯಿಂದ ಜೋಗಕ್ಕೆ ಹೋಗಿ ಬರುವ ವಾಹನದ ರಿಯಾಯಿತಿ ಪ್ರಯಾಣದ ದರ ರೂ. 600/- ನಿಗದಿಪಡಿಸಲಾಗಿದೆ.
ಈ ಪ್ರಯಾಣಕ್ಕೆ ಮುಂಗಡ ಆಸನ ಕಾಯ್ದಿರಿಸುವ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.