ಡಾ. ಕೋರೆಯವರಿಗೆ ಗ್ರಂಥಗಳ ತುಲಾಭಾರ

ಅಮೃತ ಮಹೋತ್ಸವ
Advertisement

ಬೆಳಗಾವಿ: ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ, ಉತ್ತರ ಕರ್ನಾಟಕ ಭಾಗದ ಶಿಕ್ಷಣ ಕ್ಷೇತ್ರದ ಹರಿಕಾರ ಪ್ರಭಾಕರ ಕೋರೆಯವರ ಅಮೃತ ಮಹೋತ್ಸವ ಸಮಾರಂಭದಲ್ಲಿ ಡಾ.ಕೋರೆಯವರನ್ನು ಗ್ರಂಥಗಳ ವಿಶೇಷ ತುಲಾಭಾರ ನಡೆಸಿ ಸತ್ಕರಿಸಲಾಯಿತು.
ಬೆಳಗಾವಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ ಡಾ.ಪ್ರಭಾಕರ ಕೋರೆಯವರ ಅಮೃತ ಮಹೋತ್ಸವದಲ್ಲಿ ಸೇರಿದ್ದ ಜನರು ಈ ಅಪರೂಪದ ತುಲಾಭಾರಕ್ಕೆ ಸಾಕ್ಷಿಯಾದರು.
ಸಾಮಾನ್ಯವಾಗಿ ಧನ, ಕನಕ, ದಿನಸಿ ಸಾಮಗ್ರಿ, ಹೊರೆ ಕಾಣಿಕೆಗಳಿಂದ ತುಲಾಭಾರ ಮಾಡುವ ಪದ್ಧತಿ ಕಂಡಿದ್ದವರಿಗೆ ಡಾ.ಕೋರೆಯವರನ್ನು ಗ್ರಂಥಗಳಿಂದ ತುಲಾಭಾರ ಮಾಡಿದ್ದು ಗಮನ ಸೆಳೆಯುವಂತಿತ್ತು. 1984ರಲ್ಲಿ ಕೇವಲ 34ರಷ್ಟಿದ್ದ ಕೆಎಲ್‌ಇ ಶಿಕ್ಷಣ ಸಂಸ್ಥೆಗಳನ್ನು ಇಂದು 193ಕ್ಕೆ ಏರಿಸಿರುವ ಕೀರ್ತಿ ಹೊತ್ತಿರುವ ಡಾ.ಪ್ರಭಾಕರ ಕೋರೆಯವರನ್ನು ಈ ಭಾಗದ ಜನರು ಶೈಕ್ಷಣಿಕ ಕ್ರಾಂತಿಯ ಹರಿಕಾರ ಎಂದೇ ಕರೆಯುವುದಿದೆ. ಇಂತಹ ಶಿಕ್ಷಣ ಜನಕನನ್ನು ಗ್ರಂಥಗಳ ತುಲಾಭಾರ ನಡೆಸುವ ಮೂಲಕ ಸನ್ಮಾನಿಸಿದ್ದು, ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಮೆರುಗು ನೀಡಿತು.