ಡಿಕೆಶಿ ಮಾತನಾಡಿದ ಆಡಿಯೋದಲ್ಲೇನಿದೆ.?

Advertisement

ಆಡಿಯೋ ಮಾತನಾಡಿರುವ ಶಾಸಕ ರಮೇಶ್ ಜಾರಕಿಹೊಳಿ, ಅದರಲ್ಲಿ ಶಿವಕುಮಾರ್ ಅವರು, ದುಬೈ, ಲಂಡನ್‌ನಲ್ಲಿ ಮನೆ ಇದೆ. ಹಾಗೂ ಸಾವಿರಾರು ಕೋಟಿ ಇರೋದಾಗಿ ಮಾತನಾಡಿರುವ ಆಡಿಯೋ ನನ್ನ ಬಳಿ ಇದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ ೪೦ ಕೋಟಿ ಡೀಲ್ ಕುರಿತು ಸಂಭಾಷಣೆ ಮಾಡಿದ್ದಾರೆ. ಆ ಆಡಿಯೋದಲ್ಲಿ ನನ್ನ ಹೆಸರೇ ಹೇಳಿ ಡಿಲ್ ನಡೆದಿದೆ ಎಂದು ರಮೇಶ್ ಜಾರಕಿಹೊಳಿ ಹೇಳಿದರು.
ಸಿಡಿ ಲೇಡಿಯನ್ನು ಅರೆಸ್ಟ್ ಮಾಡಿದರೆ ಎಲ್ಲಾ ವಿಚಾರ ಹೊರಗೆ ಬರುತ್ತದೆ. ಸದ್ಯ ಡಿಕೆಶಿ ಸುಪರ್ದಿಯಲ್ಲಿ ಬೆಂಗಳೂರಿನ ಕಾಂಗ್ರೆಸ್ ಮಹಿಳಾ ಪದಾಧಿಕಾರಿ ಮನೆಯಲ್ಲಿ ಆ ಲೇಡಿ ಇದ್ದಾರೆ ಎಂದರು. ಮುಂದಿನ ಚುನಾವಣೆ ನನ್ನ ಕೊನೆಯ ಚುನಾವಣೆ. ಅದಾದ ಬಳಿಕ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಡಿಕೆಶಿಯಂತವರು ಇರುವಾಗ ನಾವು ರಾಜಕೀಯ ಮಾಡಲು ಆಗಲ್ಲ ಎಂದು ರಮೇಶ ಜಾರಕಿಹೊಳಿ ಹೇಳಿದರು.