ತತ್ವನಿಷ್ಠ ಪ್ರಾಯೋಗಿಕ ಧರ್ಮವೇ ವೀರಶೈವ

Advertisement

ವೀರಶೈವವು ಪುರಾತನ ಧರ್ಮ. ಅದು ತತ್ವನಿಷ್ಠವಾದದು. ವ್ಯಕ್ತಿ ನಿಷ್ಠವಲ್ಲ. ಇಲ್ಲಿ ವಿಜ್ಞಾನಕ್ಕೂ ಅವಕಾಶವಿದೆ. ಆತ್ಮಜ್ಞಾನಕ್ಕೂ ಮನ್ನೆಣೆಯಿದೆ. ವೀರಶೈವ ಸಿದ್ಧಾಂತದಲ್ಲಿ ವಿಭಜನೆಯಿದೆ. ಸಂಯೋಜನೆಗಳಿಗೂ ಅವಕಾಶವಿದೆ. ಮುಖ್ಯವಾಗಿ ತತ್ವಗಳ ಮೂಲವನ್ನು ಅರಿತು ಅವುಗಳ ವಿಸ್ತಾರವನ್ನು ಮನಗಂಡು ಪುನಃ ಸಂಯೋಜನೆಯನ್ನು ಸಾಧಿಸುವಲ್ಲಿ ವೀರಶೈವವು ಗಣನೀಯ ಪಾತ್ರವಹಿಸಿದೆ. ಕೂರ್ಮಾಂಗ ನ್ಯಾಯದಂತೆ ಅದರ ಅಂಗಾಂಗಳು ಹಬ್ಬಿಕೊಳ್ಳುತ್ತವೆ ಕೂರ್ಮ ಎಂದರೆ ಆಮೆ ಅದು ತನ್ನ ಕಾಲು-ಮುಖಗಳನ್ನು ಹೊರತೆಗೆದು ಬೇಡವಾದಾಗ ಒಳಸೇರಿಸಿಕೊಳುವುದು. ಇದರಂತೆ ವೀರಶೈವ ತತ್ವತ್ರಯುಗಳನ್ನು ಅಳವಡಿಸಿಕೊಂಡಿದೆ.
ಅಷ್ಟಾವರಣವೇ ಅಂಗ. ಪಂಚಚಾರ್ಯಗಳೆ ಪ್ರಾಣ. ಘಟಸ್ಥಳಗಳೇ ಆತ್ಮವಾಗಿರುವುದು. ಈ ಧರ್ಮ ಷಟಸ್ಠಲವು ವೀರಶೈವ ದರ್ಶನ ಹಾಗೂ ಸಿದ್ಧಾಂತವೆನಿಸಿ ಷಟಸ್ಥಲ ಸಿದ್ಧಾಂತದಲ್ಲಿ ತತ್ವಗಳ ಅವರೋಹ ಮತ್ತು ಅರೋಹದ ಕ್ರಮವು ಮನೋಜ್ಞವಾಗಿ ರೂಪಗೊಂಡಿದೆ. ಇದಕ್ಕೆ ಪ್ರವೃತ್ತಿ ಮತ್ತು ನಿವೃತ್ತಿ ಎಂದು ಕರೆಯಲಾಗಿದೆ. ಜಗತ್ತಿನಲ್ಲಿ ವಿಶೇಷ ಮೌಲ್ಯಗಳನ್ನು ಹೊಂದಿದ್ದ ವೀರಶೈವವು ವಿಚಾರ ಪ್ರಧಾನವಾಗಿರುವಂತೆ ಆಚಾರ ಪ್ರಧಾನವಾಗದೇ ವಿಚಾರ ಮತ್ತು ಆಚಾರಗಳ ಸಮನ್ವಯವನ್ನು ಸಾಧಿಸಿದೆ.
ಅದಕ್ಕಾಗಿ ಇದನ್ನು ಪ್ರಾಯೋಗಿಕ ಸಿದ್ಧಾಂತವೆಂದರು. ವೀರಶೈವರು ಗುಪ್ತ ಸಾಧಕರಾಗಿ ತತ್ವಗಳನ್ನು ಅನುಷ್ಠಾನಗೊಳಿಸಿದರು. ಸಿದ್ಧಿಯನ್ನು ಸಾಧಿಸಿ ಶರಣರೆನಿಸಿದರು. ಆತ್ಮಸ್ತುತಿ ಪರನಿಂದನೆಗಳಿಗೆ ಹೊರತಾದ ವೀರಶೈವವು ತತ್ವನಿಷ್ಠವಾಗಿ ಬೆಳೆದು ಅನುಷ್ಠಾನದ ಮೂಲಕ ತತ್ವ ಸ್ವರೂಪಿಯಾಗುವ ಮೌಲ್ಯ ಪಡೆದಿದೆ. ಹೀಗಾಗಿ ವೀರಶೈವ ಧರ್ಮದಲ್ಲಿ ಮುಕ್ತಿಗೆ ಸೋಪಾನಗಳು ಸಾಧನೆಗೆ, ಸಿದ್ಧಿಗೆ ಅನೇಕ ದಾರಿಗಳಿವೆ. ಒಂದರ್ಥದಲ್ಲಿ ಕಾಲಕ್ಕೆ ಅನುಗುಣವಾಗಿ ಅನುಸರಿಸಲು ಯೋಗ್ಯವಾಗುವಂಥ ಸ್ಥಿತಿಸ್ಥಾಪಕ ಗುಣವನ್ನು ವೀರಶೈವ ಧರ್ಮ ಹೊಂದಿದೆ.