ತಮಿಳುನಾಡಿಗೆ ನೀರು: ಕಾವೇರಿ ನದಿಗಿಳಿದು ಪ್ರತಿಭಟನೆ

Advertisement

ಶ್ರೀರಂಗಪಟ್ಟಣ: ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ, ಮೇಲು ಕೋಟೆ ಕ್ಷೇತ್ರದ ಶಾಸಕ ದರ್ಶನ ಪುಟ್ಟಣಯ್ಯ ನೇತೃತ್ವದಲ್ಲಿ ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಸೇರಿದಂತೆ ರೈತ ಸಂಘ ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳ ನೂರಾರು ಕಾರ್ಯಕರ್ತರು ಕಾವೇರಿ ನದಿಗಿಳಿದು ಪ್ರತಿಭಟನೆ ನಡೆಸಿದರು.
ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ‌ ತಾಲ್ಲೂಕಿನ ಕೆಆರ್ ಎಸ್ ಕನ್ನಂಬಾಡಿ ಅಣೆಕಟ್ಟೆ ಬಳಿ‌ ನಡೆಸುತ್ತಿರುವ ಆಹೋರಾತ್ರಿ ಅನಿರ್ಧಿಷ್ಠಾವಧಿ ಧರಣಿ ಶನಿವಾರವೂ ಮುಂದೆವರೆದಿದ್ದು, ಅಣೆಕಟ್ಟೆಯಲ್ಲಿ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಕುಸಿತ ಕಂಡಿದ್ದರೂ ಕೂಡ ತಮಿಳು ನಾಡಿಗೆ ನೀರು ಹರಿಸುವಂತೆ ಸೂಚನೆ ನೀಡಿರುವ ಕಾವೇರಿ ನಿರ್ವಹಣಾ ಪ್ರಾಧಿಕಾರ ಮತ್ತು ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಷ ವ್ಯಕ್ತ ಪಡಿಸಿ ಇಲ್ಲಿನ‌ ಕಾವೇರಿ ನದಿಗಿಳಿದು ಪ್ರತಿಭಟಿಸಿದರು.


ಕಾವೇರಿ ನದಿ ನೀರಿಗಾಗಿ ಹೋರಾಟ ನಡೆಸುವ ರೈತ ಸಂಘಕ್ಕೆ ಪಕ್ಷಾತೀತವಾಗಿ ಅಮ್ ಆದ್ಮಿ ಪಕ್ಷದ ವತಿಯಿಂದ ಬೆಂಬಲ ಸೂಚಿಸಿದ್ದೇವೆ ಎಂದು ಪಕ್ಷದ ರಾಜ್ಯಾದ್ಯಕ್ಷ ಮುಖ್ಯತ್ರಿ ಚಂದ್ರು ತಿಳಿಸಿದರು.
ಕೇವಲ ರೈತರು ಮಾತ್ರ ಹೋರಾಟ ಮಾಡುತ್ತಿರುವುದು ಕಂಡು ಬಂದಿದೆ, ಈ ವ್ಯಾಪ್ತಿಯ ಎಲ್ಲರ ಜವಬ್ದಾರಿಯಾಗಿದೆ, ಇನ್ನೂ ಮಂಡ್ಯ, ಮೈಸೂರು, ರಾಮನಗರ ಜಿಲ್ಲೆಗಳ ಸಂಸದರು ಏಕೆ ಮೌನವಾಗಿದ್ದಾರೆ, ಅವರು ಕಾವೇರಿ ನೀರು ಕುಡಿಯದಿಲ್ವ, ಅವರ ಮೌನ ತಿಳಿಯುತ್ತಿಲ್ಲ, ರಾಜಕೀಯ ಬಿಟ್ಟು ಬರಬೇಕು , ಎಲ್ಲ ಶಾಸಕರು ರೈತರ ಕಾವೇರಿಗಾಗಿ ಬೆಂಬಲಿಸಬೇಕು. ಎಲ್ಲ ಮಠ ಮಾನ್ಯಗಳ ಸ್ವಾಮಿಜಿಗಳು, ಚಿತ್ರರಂಗದ ಕಲಾವಿದರು, ಸಾಹಿತಿಗಳು, ಕಾರ್ಖನೆಗಳ ಮಾಲೀಕರು, ನೌಕರರು, ವಿವಿಧ ವೃತಿಪರರು ಪಕ್ಷಾತೀತವಾಗಿ ಕಾವೇರಿ ನೀರಿನ ಹೋರಾಟಕ್ಕೆ ಬೆಂಬಲಿಸಬೇಕು‌ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.