ದಾಖಲೆ ಇಲ್ಲದ 4.50. ಲಕ್ಷ ಹಣ ಜಪ್ತಿ

ಕಲಬುರಗಿ
Advertisement

ಕಲಬುರಗಿ: ಜೇವರ್ಗಿ ತಾಲ್ಲೂಕಿನ ಗಡಿ ಗ್ರಾಮ ಹಾಗೂ ಸಿಂದಗಿ ತಾಲ್ಲೂಕಿನ ಗಡಿ ಅಂಚಿನಲ್ಲಿರುವ ಜೇರಟಗಿ ಚೆಕ್ ಪೋಸ್ಟ್ ಬಳಿ ದಾಖಲೆ‌ಇಲ್ಲದ 4.50. ಲಕ್ಷ ಹಣ ಜಪ್ತಿ ಮಾಡಲಾಗಿದೆ. ಜೇವರ್ಗಿ ತಾಲೂಕ ಜೇರಟಗಿ ಚೆಕ್ ಪೋಸ್ಟ್‌ನಲ್ಲಿ
ಬುಲೆರೋ ವಾಹನದಲ್ಲಿ ತೆಗೆದುಕೊಂಡು ಹೋಗುವಾಗ ಪರಿಶೀಲಿಸಿ ಪೊಲೀಸರು ಆ ಹಣ ವಶಕ್ಕೆ ಪಡೆದಿದ್ದಾರೆ. ಮಹಿಬೂಬಸಾಬ್ ಎಂಬಾತ ಸಿಂದಗಿ ಕಡೆಯಿಂದ ಜೇರಟಗಿ ಬಳಿ ಬಂದಾಗ ಚೆಕ್ ಮಾಡಿದಾಗ ಹಣ ಪತ್ತೆಯಾಗಿದೆ.
ವಡಗೇರಾ ಗ್ರಾಮದಿಂದ ತೆಗೆದುಕೊಂಡು ಬರುತ್ತಿದ್ದ ಮಹಿಬೂಬಸಾಬ್ ಎಂದು ಈ ಕುರಿತು ನೇಲೋಗಿ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದುವರೆಗೆ ಜಿಲ್ಲೆಯಲ್ಲಿ ‌ಒಟ್ಟು 4.55 ಕೋಟಿ ರೂ. ಜಪ್ತಿ ಮಾಡಿದಂತಾಗಿದೆ.