ದೀಪಾವಳಿಗೆ ಜಿಯೊ 5ಜಿ

Advertisement

ಮುಂಬೈ: ದೀಪಾವಳಿ ಹೊತ್ತಿಗೆ ಜಿಯೋ 5ಜಿ ಸೇವೆಗಳಿಗೆ ಚಾಲನೆ ನೀಡಲಿದೆ ಎಂದು ರಿಲಯನ್ಸ್ ಅಧ್ಯಕ್ಷ ಮುಕೇಶ್ ಅಂಬಾನಿ ಪ್ರಕಟಿಸಿದ್ದಾರೆ.
ಇದಕ್ಕಾಗಿ ೨ ಲಕ್ಷ ಕೋಟಿ ರೂ. ಬಂಡವಾಳ ಹೂಡಿದ್ದು, ದೀಪಾವಳಿ ಹೊತ್ತಿಗೆ ಮೆಟ್ರೋ ನಗರಗಳಲ್ಲಿ ಸೇವೆ ಪ್ರಾರಂಭಗೊಳ್ಳಲಿದೆ. ಎರಡು ತಿಂಗಳಲ್ಲಿ ದೆಹಲಿ, ಮುಂಬೈ, ಚೆನ್ನೈ ಮತ್ತು ಕೊಲ್ಕತಾಗಳ ಜನರಿಗೆ ಸೇವೆ ದೊರೆಯಲಿದೆ ಎಂದು ರಿಲಯನ್ಸ್ ವಾರ್ಷಿಕ ಸರ್ವಸದಸ್ಯರ ಸಭೆಯಲ್ಲಿ ಅವರು ತಿಳಿಸಿದರು.

ಅಂಬಾನಿ

ಅಂಬಾನಿ ಸಾಮ್ರಾಜ್ಯಕ್ಕೆ ಉತ್ತರಾಧಿಕಾರಿಗಳು:
ಮುಕೇಶ್ ಅಂಬಾನಿ ಮಗಳು ಇಶಾ ಅವರನ್ನು ರಿಲಯನ್ಸ್‌ನ ರೀಟೇಲ್ ವ್ಯಾಪಾರ ಮುಖ್ಯಸ್ಥರನ್ನಾಗಿ ಮಾಡಿದರೆ, ಕಿರಿಯ ಪುತ್ರ ಅನಂತ್ ಅವರನ್ನು ಇಂಧನ ವ್ಯಾಪಾರದ ಮುಖ್ಯಸ್ಥರನ್ನಾಗಿ ಘೋಷಿಸಲಾಯಿತು. ಈಗಾಗಲೇ ಹಿರಿಯ ಪುತ್ರ ಆಕಾಶ್ ಅವರನ್ನು ಟೆಲಿಕಾಂ ವಿಭಾಗದ ಚೇರ್ಮನ್ ಆಗಿ ನಿಯುಕ್ತಿಗೊಳಿಸಲಾಗಿದೆ.