ದೂದ್‌ಸಾಗರ ಜಲಪಾತಕ್ಕೆ ದಿಢೀರ ನೀರು: ಪ್ರವಾಸಿಗರ ರಕ್ಷಣೆ

ದೂದ್‌ಸಾಗರ
Advertisement

ಪಣಜಿ: ಬೆಳಗಾವಿ ಭಾಗದಲ್ಲಿ ಶುಕ್ರವಾರ ಭಾರಿ ಮಳೆಯಾದ ಪರಿಣಾಮ ಗೋವಾದ ದೂದ್‌ಸಾಗರ ಜಲಪಾತ ವೀಕ್ಷಣೆಗೆ ತೆರಳಿದ್ದ ಹಲವು ಜನ ಪ್ರವಾಸಿಗರು ಜಲಪಾತದ ಬಳಿ ಸಿಲುಕಿದ ಘಟನೆ ನಡೆದಿದೆ.
ದೂದ್‌ಸಾಗರ ಜಲಪಾತದ ನೀರಿನ ಹರಿವು ದಿಢೀರ್ ಹೆಚ್ಚಾದ ಪರಿಣಾಮ ಜಲಪಾತದ ಬಳಿ ತೆರಳಲು ಹಾಕಿದ್ದ ಕಾಲು ಸಂಕ ಕೊಚ್ಚಿ ಹೋಗಿದೆ, ಇದರಿಂದಾಗಿ ಜಲಪಾತ ವೀಕ್ಷಣೆಗೆ ತರಳಿದ್ದ ಹಲವು ಜನ ಪ್ರವಾಸಿಗರು ವಾಪಸ್ ಬರಲಾರದೆ ಸಿಕ್ಕಿ ಹಾಕಿಕೊಂಡಿದ್ದರು. ನಂತರ ರಕ್ಷಣಾ ತಂಡ ಹಲವು ಗಂಟೆಗಳ ಕಾರ್ಯಾಚರಣೆ ನಡೆಸಿ ಪ್ರವಾಸಿಗರನ್ನು ರಕ್ಷಣೆ ಮಾಡಿದರು. ಅದೃಷ್ಟವಶಾತ್ ಜಲಪಾತದ ನೀರಿನ ಹರಿವು ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದ್ದರೂ ಕೂಡ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎನ್ನಲಾಗಿದೆ.
ಇನ್ನು ಹಲವು ದಿನ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಇದರಿಂದಾಗಿ ಜಗತ್ಪ್ರಸಿದ್ಧ ದೂದ್‌ಸಾಗರ್ ಜಲಪಾತ ವೀಕ್ಷಣೆಗೆ ತೆರಳುವ ಪ್ರವಾಸಿಗರು ಎಚ್ಚರಿಕೆ ವಹಿಸುವುದು ಸೂಕ್ತ ಎಂದೆ ಹೇಳಲಾಗುತ್ತಿದೆ.