ದೂರದೃಷ್ಟಿ ಇರಲಾರದೇ ಮಂಡಿಸಿದ ನೀರಸ ಬಜೆಟ್

ಪ್ರಲ್ಹಾದ್ ಜೋಶಿ
Advertisement

ಧಾರವಾಡ: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಯಾವುದೇ ದೂರದೃಷ್ಟಿ ಇರಲಾರದೇ ಮಂಡಿಸಿದ ನೀರಸ ಬಜೆಟ್ ಆಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
ಧಾರವಾಡದಲ್ಲಿ ಮಾತನಾಡಿದ ಅವರು, ಜನರ ಸಾಲದ ಹೊರೆ ಹೆಚ್ಚಿಸುವ ಬಜೆಟ್ ಇದಾಗಿದೆ. ಅಬಕಾರಿ ತೆರಿಗೆ ಹಾಗೂ ಆಸ್ತಿ ತೆರಿಗೆ ಹೆಚ್ಚಿಸಲಾಗಿದೆ. ರಾಜ್ಯವನ್ನು ಸಾಲದ ಕೂಪಕ್ಕೆ ತಳ್ಳುವುದಕ್ಕೆ ಪೂರಕವಾದ ಬಜೆಟ್ ಇದಾಗಿದೆ. ಈ ಬಾರಿಯೂ ಕೇಂದ್ರ ಸರಕಾರ ದೇಶದ ೮೦ ಕೋಟಿ ಜನರಿಗೆ ಅಕ್ಕಿ ನೀಡಿದೆ. ಕೇಂದ್ರ ಸರಕಾರ ಯಾವುದೇ ತಾರತಮ್ಯ ಮಾಡಿಲ್ಲ. ಆದರೂ ರಾಜ್ಯ ಸರಕಾರದವರು ಅಕ್ಕಿ ನೀಡಿಲ್ಲ ಎಂದು ಕೇಂದ್ರ ಸರಕಾರದ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದರು.