ದೇಶದಲ್ಲಿ ಜನ ಕಾಂಗ್ರೆಸ್ ಧ್ವನಿ ಅಡಗಿಸಿದ್ದಾರೆ

Advertisement

ಹುಬ್ಬಳ್ಳಿ: ದೇಶದಲ್ಲಿ ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿಯನ್ನು ಜನರು ಅಡಗಿಸಿದ್ದು, ತಮ್ಮ 60 ವರ್ಷದ ಆಳ್ವಿಕೆಯಲ್ಲಿ 93 ಬಾರಿ ಚುನಾಯಿತ ಸರಕಾರಗಳನ್ನು ಕಿತ್ತು ಎಸೆದವರು ಈಗ ಪ್ರಜಾ ಧ್ವನಿ ಎಂದು ಹೊರಟ್ಟಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವ್ಯಂಗ್ಯವಾಡಿದರು.
ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದ ಉಪ ಚನುವಾಣೆಯಲ್ಲೂ ಕೂಡ ಕಾಂಗ್ರೆಸ್‌ ಧ್ವನಿಯನ್ನು ಜನರು ಅಡಗಿಸಿದ್ದಾರೆ. ಉತ್ತರ ಪ್ರದೇಶ, ಗುಜರಾತ್ ಅಡಗಿಸಿದ್ದು, ರಾಜಸ್ಥಾನ, ಛತ್ತಿಸಗಡದಲ್ಲೂ ಮುಂದೆ ಧ್ವನಿ ಅಡಗಿಸಲಿದ್ದಾರೆ. ಪ್ರಜೆಗಳು ಇವರ ಧ್ವನಿ ಅಡಗಿಸಿದ್ದರಿಂದ ತಮ್ಮ ಧ್ವನಿಯನ್ನೇ ಪ್ರಜಾಧ್ವನಿ ಎಂದು ಹೇಳುತ್ತಿದ್ದಾರೆ ಎಂದರು.
ಕಾಂಗ್ರೆಸ್ ಪಕ್ಷ 200 ಯುನಿಟ್ ಉಚಿತ ವಿದ್ಯುತ್ ನೀಡುವುದಾಗಿ ಘೋಷಿಸಿದೆ. ತಮ್ಮ ಅಧಿಕಾರ ಅವಧಿಯಲ್ಲಿ ಹಣ ಪಡೆದು ವಿದ್ಯುತ್ ನೀಡಲು ಇವರಿಂದ ಆಗಿಲ್ಲ. ಪ್ರಧಾನಿ ನರೇಂದ್ರ ಮೋದಿ ಆದ ಮೇಲೆ ಎಲ್ಲಿಯೂ ಸಹ ವಿದ್ಯುತ್ ಕೊರತೆಯಾಗದಂತೆ ನೋಡಿಕೊಳ್ಳಲಾಗಿದೆ ಎಂದು ಹೇಳಿದರು.
ಕಾಂಗ್ರೆಸ್ನವರು ಮತಕ್ಕಾಗಿ ಸುಳ್ಳು ಹೇಳಿ ಜೀವನ ಮಾಡುತ್ತಿದ್ದಾರೆ. ನಾ ನಾಯಕಿ ಎಂದು ರಾಜ್ಯಕ್ಕೆ ಬಂದ ಹೋದ ನಕಲಿ ಗಾಂಧಿ ಕುಡಿಗಳು ರಾಜಸ್ಥಾನದಲ್ಲಿ ಅವರ ಸಹೋದರ ಹೇಳಿದ್ದು ಯಾಕೆ ಮಾಡಿಲ್ಲ ಎನ್ನುವುದಕ್ಕೆ ಉತ್ತರ ನೀಡಬೇಕು ಎಂದರು.
ಕಾಂಗ್ರೆಸ್ ವಿಶ್ವಾಸಕ್ಕೆ ಅರ್ಹವಲ್ಲ ಎಂಬುವುದು ಸಾಬೀತಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಭ್ರಷ್ಟಾಚಾರ ಮಾಡಿ ಕೆಪಿಟಿಸಿಎಲ್ ಸತ್ಯಾನಾಶ ಮಾಡಿದ್ದವರು ಈ ರೀತಿ ಸುಳ್ಳು ಘೋಷಣೆ ಮಾಡುತ್ತಿದ್ದಾರೆ.
ಎಸ್.ಡಿ.ಪಿಐ ಹಾಗೂ ಪಿಎಪ್ಐ ತೆಗೆದು ರಾಷ್ಟ್ರದ್ರೋಹದ ಕಾರ್ಯದಲ್ಲಿ ತೊಡಗಿದವರು ನಮಗೆ ಹೇಳುವ ಅವಶ್ಯಕತೆ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರ ಬಿಜೆಪಿ ಬಿ ರಿಪೋಟರ್್ ಪಕ್ಷ ಎಂಬ ಹೇಳಿಕೆ ಪ್ರತಿಕ್ರಿಯಿಸಿದರು.
ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹುಬ್ಬಳ್ಳಿ ಹಾಗೂ ಕಲಬುಗರ್ಿ ಕಾರ್ಯಕ್ರಮ ಯಶಸ್ವಿಯಾಗಿರುವುದನ್ನು ನೋಡಿ ಗಾಬರಿಯಾಗಿ ಹೀಗೆ ಮಾತನಾಡುತ್ತಿದ್ದಾರೆ. ಮೊದಲು ಅವರು ಡಿ.ಕೆ. ಶಿವಕುಮಾರ ಜೊತೆ ಹೊಂದಾಣಿಕೆ ಮಾಡಿಕೊಳ್ಳಿ. ಸಿದ್ದರಾಮಯ್ಯ ಅವರು 11 ಬಜೆಟ್ ಮಂಡಿಸಿದವರು, 5 ವರ್ಷ ಮುಖ್ಯಮಂತ್ರಿಯಾದವರಿಗೆ ಒಂದು ಕ್ಷೇತ್ರ ಸಿಗುತ್ತಿಲ್ಲ. ಸರಿಯಾಗಿ ಬಾದಾಮಿಯಲ್ಲಿ ಅಭಿವೃದ್ಧಿ ಮಾಡಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಕೋಲಾರದಲ್ಲಿ ಅವರು ಸೋಲಲಿದ್ದಾರೆ. ಕೋಲಾರದಲ್ಲಿ ಯಾವುದೇ ಅಚ್ಚರಿ ಅಭ್ಯಥರ್ಿ ಇಲ್ಲ. ಅಲ್ಲಿದ್ದವರನ್ನೇ ನಿಲ್ಲಿಸಲಾಗುವುದು ಎಂದು ಹೇಳಿದರು.