ದ್ವಿತೀಯ ಪಿಯು ಫಲಿತಾಂಶ: ಬಳ್ಳಾರಿ ಜಿಲ್ಲೆಗೆ 27ನೇ ಸ್ಥಾನ

Advertisement

ಬಳ್ಳಾರಿ:ದ್ವಿತೀಯ ಪಿಯುಸಿ ಫಲಿತಾಂಶ ಹೊರಬಿದ್ದಿದ್ದು, ಬಳ್ಳಾರಿ ಜಿಲ್ಲೆ ಈ ಬಾರಿ 27ನೇ ಸ್ಥಾನಕ್ಕೆ ಕುಸಿದೆ. ಈ ಮೂಲಕ ನಾಲ್ಕು ಸ್ಥಾನ ಮೇಲಕ್ಕೆ ಏರಿದೆ. ಕಳೆದ ವರ್ಷ ಶೇ.55.48ರಷ್ಟು ಫಲಿತಾಂಶದೊಂದಿಗೆ 31ನೇ ಸ್ಥಾನದಲ್ಲಿದ್ದ ಅಖಂಡ ಬಳ್ಳಾರಿ ಜಿಲ್ಲೆ ಈ ವರ್ಷ ಶೇ.69.55ರಷ್ಟು ಫಲಿತಾಂಶದೊಂದಿಗೆ ಉತ್ತಮ ಸಾಧನೆ ಮಾಡಿದೆ.
ಈ ಮೂಲಕ ಫಲಿತಾಂಶದಲ್ಲಿ ಶೇ.14.07ರಷ್ಟು ಸುಧಾರಣೆ ಕಂಡಿದೆ. ಕಳೆದ ಬಾರಿ ಒಟ್ಟು೮ 26084 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 14,472ವಿದ್ಯಾರ್ಥಿಗಳ ತೇರ್ಗಡೆ ಆಗಿದ್ದರು. ಕಲಾ ವಿಭಾಗದಲ್ಲಿ 12,313 ವಿದ್ಯಾರ್ಥಿಗಳ ಪೈಕಿ 5799 ವಿದ್ಯಾರ್ಥಿಗಳು ಪಾಶಾಗಿದ್ದರು. ಶೇ.47.1ರಷ್ಟು ಫಲಿತಾಂಶ ಲಭಿಸಿತ್ತು. ವಾಣಿಜ್ಯ ವಿಭಾಗದಲ್ಲಿ 6,600 ವಿದ್ಯಾರ್ತಿಗಳ ಪೈಕಿ 3819(ಶೇ.57.86) ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದರು. ವಿಜ್ಞಾನ ವಿಭಾಗದಲ್ಲಿ 7171 ವಿದ್ಯಾರ್ಥಿಗಳ ಪೈಕಿ 4854 ವಿದ್ಯಾರ್ಥಿಗಳು ಪಾಸಾಗಿದ್ದರು. ಶೇ.67.89ರಷ್ಟು ಫಲಿತಾಂಶ ಬಂದಿತ್ತು.
ಕಲಾ ವಿಭಾಗದಲ್ಲಿ ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದಲ್ಲಿ ಇಂದು ಇನೋವೇಟಿವ್ ಕಾಲೇಜಿನ ಕುಶಾನಾಯಕ್ ಜಿ.ಎಲ್. 592 ಅಂಕಗಳೊಂದಿಗೆ ರಾಜ್ಯಕ್ಕೆ ಅತಿ ಹೆಚ್ಚು ಅಂಕ ಪಡೆದ 2ನೆಯ ವಿದ್ಯಾರ್ಥಿ ಎಂಬ ಕೀರ್ತಿಗೆ ಭಾಜನ ಆದರೆ, ಹರಪನಹಳ್ಳಿ ಎಸ್‌ಯುಜೆಎಂ ಪಿಯು ಕಾಲೇಜಿನ ಮುತ್ತೂರು ಮಲ್ಲಮ್ಮ 592 ಅಂಕಗಳೊಂದಿಗೆ ಇಡೀ ರಾಜ್ಯಕ್ಕೆ 4ನೆಯ ರ‍್ಯಾಂಕ್ ಪಡೆದುಕೊಂಡಿದ್ದಾರೆ. ಕೊಟ್ಟೂರು ಇಂದು ಪಿಯು ಕಾಲೇಜಿನ ಕೆ.ಕೃಷ್ಣ 591 ಅಂಕ ಪಡೆದು ರಾಜ್ಯಕ್ಕೆ 8ನೆಯ ರ‍್ಯಾಂಕ್ ಪಡೆದುಕೊಂಡಿದ್ದಾನೆ. ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಿಂದ ಜಿಲ್ಲೆಯ ಯಾವುದೇ ವಿದ್ಯಾರ್ಥಿ ಟಾಪ್ 10ರ ಒಳಗೆ ರ‍್ಯಾಂಕ್ ಪಡೆದುಕೊಂಡಿಲ್ಲ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ.