ದ. ಕ. ಜಿಲ್ಲೆ: ಮುಂಗಾರು ಅಬ್ಬರ

Advertisement

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಅಬ್ಬರದ ಮುಂಗಾರು ಮಳೆಯಾಗಿದೆ. ಕಳೆದ ರಾತ್ರಿಯಿಂದ ನಿರಂತರ ಮಳೆಯಾಗುತ್ತಿದ್ದು, ಇಂದು ಮಧ್ಯಾಹ್ನದ ವೇಳೆಗೆ ಕೊಂಚ ವಿರಾಮ ಪಡೆದಿದೆ. ಮೋಡ ಕವಿದ ವಾತಾವರಣ ಮುಂದುವರೆದಿದ್ದು ಸಂಜೆ ಮತ್ತೆ ಭಾರಿ ಮಳೆಯಾಗಿದೆ.
ನಿರಂತರ ಮಳೆಗೆ ಜಿಲ್ಲೆಯ ವಿವಿದೆಡೆ ಕೃತಕ ನೆರೆಯಾಗಿ ತಗ್ಗು ಪ್ರದೇಶಗಳು ಜಲಾವೃತಗೊಂಡಿದೆ. ಪಂಪ್‌ವೆಲ್ ಮೇಲ್ಸೇತುವೆ ಕೆಳಗಡೆ ನೀರು ತುಂಬಿದ್ದು, ಸಂಪೂರ್ಣ ಜಲಾವೃತವಾಗಿದೆ. ಈ ಭಾಗದಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ನಗರದೆಲ್ಲೆಡೆ ವಾಹನ ದಟ್ಟಣೆ ಹೆಚ್ಚಿದೆ. ವಾಹನ ದಟ್ಟಣೆಯಿಂದ ಅಂಅಂತರ್ಜಾಲ ಸೇವೆಯಲ್ಲಿ ವ್ಯತ್ಯಯ ಕಂಡು ಬಂದಿದೆ.
ಮಳೆ ನೀರು ರಸ್ತೆಯಲ್ಲಿ ಹರಿಯುತ್ತಿರುವುದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಮಂಗಳೂರಿನ ಪಿ.ವಿ.ಎಸ್ ವೃತ್ತದಿಂದ ಬಿಜೆಪಿ ಕಚೇರಿ ಮುಂಭಾಗದಿಂದ ಹಂಪನಕಟ್ಟೆ ಬರುವ ಕೈಬರ್ ಪಾಸ್ ಲೇನ್ನ ರಸ್ತೆಯಲ್ಲಿ ಗುಡ್ಡ ಕುಸಿದಿದ್ದು ಅಪಾಯವನ್ನು ಸೃಷ್ಟಿಸಿದೆ. ಗುಡ್ಡ ಕುಸಿದ ಮೇಲ್ಭಾಗದಲ್ಲಿ ಕೋರ್ಟ್ ಆವರಣ ಮತ್ತು ರಸ್ತೆ ಇದ್ದು ನೂರಾರು ವಾಹನಗಳು ನಿತ್ಯ ಈ ಮಾರ್ಗಲ್ಲಿ ಸಂಚರಿಸುತ್ತಿವೆ, ಇದೀಗ ಈ ಭಾಗದಲ್ಲಿ ಭೂ ಕುಸಿತ ಉಂಟಾದ ಕಾರಣ ಸಂಚಾರಕ್ಕೆ ತೊಂದರೆಯಾಗಿದೆ. ಮಳೆಯಿಂದ ಗಂಭೀರ ಅನಾಹುತಗಳಾದ ಘಟನೆ ನಡೆದಿಲ್ಲ.
ಮೀನುಗಾರರು ಕಡಲಿಗಿಳಿಯಂತೆ ಎಚ್ಚರಿಕೆ ನೀಡಲಾಗಿದೆ. ಜಿಲ್ಲೆಯಲ್ಲಿ ೫ರ ವರೆಗೆ ಭಾರಿ ಮಳೆ ಸುರಿಯಲಿದೆ ಎಂದು ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆ ಜು.೪, ೫ರಂದು ಆರೆಂಜ್ ಅಲರ್ಟ್ ಘೋಷಿಸಿದೆ.
ಇಂದು ಬೆಳಗ್ಗಿನ ೮.೩೦ರ ತನಕ ಕಳೆದ ೨೪ ತಾಸಿನಲ್ಲಿ ಜಿಲ್ಲೆಯಲ್ಲಿ ಸರಾಸರಿ ೪೦.೫ ಮಿಲಿ ಮೀಟರ್ ಮಳೆಯಾಗಿದೆ. ಮೂಡುಬಿದಿರೆ ೬೫.೬, ಮಂಗಳೂರಿನಲ್ಲಿ ೫೫.೩, ಬಂಟ್ವಳ ೪೯.೮, ಸುಳ್ಯ ೪೧.೬, ಬೆಳ್ತಂಗಡಿ, ೩೪, ಪುತ್ತೂರು ೩೩.೫, ಕಡಬ ೨೫.೨ ಮಿಲಿ ಮೀಟರ್ ಮಳೆಯಾಗಿದೆ