ಧಾರವಾಡ: ಕಣದಲ್ಲಿ17 ಅಭ್ಯರ್ಥಿಗಳು

Advertisement

ಧಾರವಾಡ: ಧಾರವಾಡ ಲೋಕಸಭೆಗೆ ಇಂದು ಮತದಾನ ನಡೆಯಲಿದ್ದು, ರಾಷ್ಟ್ರೀಯ ಪಕ್ಷಗಳು ಸೇರಿದಂತೆ ೧೭ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.
ಭಾರತೀಯ ಜನತಾ ಪಾರ್ಟಿಯಿಂದ ಪ್ರಲ್ಹಾದ ಜೋಶಿ, ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದಿಂದ ವಿನೋದ ಅಸೂಟಿ ಮತ್ತು ನೋಂದಾಯಿತ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಾಗಿ ನಾಕಿ ಭಾರತೀಯ ಏಕತಾ ಪಾರ್ಟಿಯಿಂದ ಜಾವೀದ ಅಹಮದ್ ಬೆಳಗಾಂವಕರ್, ಪ್ರಹಾರ ಜನಶಕ್ತಿ ಪಾರ್ಟಿಯಿಂದ ಟಾಕಪ್ಪ ಯಲ್ಲಪ್ಪ ಕಲಾಲ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ನಾಗರಾಜ ಕರೆಣ್ಣವರ, ಉತ್ತಮ ಪ್ರಜಾಕೀಯ ಪಾರ್ಟಿಯಿಂದ ಬುಗಡಿ ಬಸವಲಿಂಗಪ್ಪ ಈರಪ್ಪ, ಭಾರತೀಯ ಪ್ರಜೆಗಳ ಕಲ್ಯಾಣ ಪಕ್ಷದಿಂದ ಮಹಮ್ಮದ ಇಸ್ಮಾಯಿಲ್ ಮುಕ್ತಿ, ಪ್ರೌಟೀಸ್ಟ್ ಬ್ಲಾಕ್ ಇಂಡಿಯಾ ಪಕ್ಷದಿಂದ ವಿನೋದ ದಶರಥ ಘೋಡಕೆ, ಇಂಡಿಯನ್ ಲೇಬರ್ ಪಾರ್ಟಿ (ಅಂಬೇಡ್ಕರ, ಪುಲೆ)ಯಿಂದ ವೆಂಕಟೇಶ ಪ್ರಸಾದ ಎಚ್., ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯೂನಿಸ್ಟ್) ಪಕ್ಷದಿಂದ ಶರಣಬಸವ ಗೋನವಾರ ಮತ್ತು ಟಿಪು ಸುಲ್ತಾನ ಪಾರ್ಟಿಯಿಂದ ಬಂಕಾಪುರ ಶೌಖತ್ ಅಲಿ ಅವರು ಸ್ಪರ್ಧಿಸಿದ್ದಾರೆ.
ಪಕ್ಷೇತರ ಅಭ್ಯರ್ಥಿಗಳಾಗಿ ಡಾ.ಗುರಪ್ಪ ಹೆಚ್.ಇಮ್ರಾಪೂರ, ಪ್ರವೀಣ ಹ.ಹತ್ತೆನವರ, ಬಾಳನಗೌಡ್ರ ಮಲ್ಲಿಕಾರ್ಜುನಗೌಡ, ರಾಜು ಅನಂತಸಾ ನಾಯಕವಾಡಿ, ಶಕೀಲ ಅಹ್ಮದ ಡಿ ಮುಲ್ಲಾ ಮತ್ತು ಎಸ್.ಎಸ್.ಪಾಟೀಲ್ ಸ್ಪರ್ಧಿಸಿದ್ದಾರೆ.