ನಟಿ ಶ್ರೀ ಲೀಲಾ ತಾಯಿ ಮೇಲೆ ಎಫ್​ಐಆರ್​​​..!

Advertisement

ಬೆಂಗಳೂರು : ನಟಿ ಶ್ರೀ ಲೀಲಾ ತಾಯಿ ಮೇಲೆ ಎಫ್​ಐಆರ್​​​ ದಾಖಲಾಗಿದ್ದು, ಅಲೆಯನ್ಸ್ ವಿವಿಯಲ್ಲಿ ಸಿಬ್ಬಂದಿ ಜೊತೆ ಗಲಾಟೆ ನಡೆದಿದೆ. ಆನೇಕಲ್​​ ​​ ಪೊಲೀಸ್​ ಠಾಣೆಯಲ್ಲಿ ಕೇಸ್​ ದಾಖಲಾಗಿದೆ.

50 ಗೂಂಡಾಗಳ ಜತೆ ಅಲೆಯನ್ಸ್ ವಿವಿಗೆ ನುಗ್ಗಿ ಬೆದರಿಕೆ ಹಾಕಿದ್ದು, ಗನ್​​​​ ತೋರಿಸಿ ಬೆದರಿಸಿದ ಆರೋಪದ ಮೇಲೆ ಕೇಸ್​ ದಾಖಲಾಗಿದೆ. ಈ ಸಂಬಂಧ ರಿಜಿಸ್ಟ್ರಾರ್​ ನಿವೇದಿತಾ ಮಿಶ್ರಾ ದೂರು ನೀಡಿದ್ಧಾರೆ. ಶ್ರೀಲೀಲಾ ತಾಯಿ ಸ್ವರ್ಣ ಲತಾ ಸೇರಿ ಹಲವರ ವಿರುದ್ಧ ದೂರು ದಾಖಲಾಗಿದೆ. A-1: ಮಧುಕರ್​ ಅಂಗೂರ್​, A-2 ಸ್ವರ್ಣಲತಾ ಆರೋಪಿಗಳಾಗಿದ್ಧಾರೆ.

ಸ್ವರ್ಣಲತಾ ಕೋರ್ಟ್ ಆದೇಶ ಉಲ್ಲಂಘಿಸಿ ಅಲೆಯನ್ಸ್ ವಿವಿಗೆ ನುಗ್ಗಿದ ಆರೋಪ ಕೇಳಿಬಂದಿದೆ. ಸಿಬ್ಬಂದಿ ಬೆದರಿಸಿ, ಅಲ್ಲಿಂದ ಓಡಿಸುವ ಬೆದರಿಕೆ ಆರೋಪ ಮಾಡಿದ್ಧಾರೆ. ಮಧುಕರ್​​ ಅಂಗೂರ್​​​, ಸ್ವರ್ಣಲತಾ ಮೇಲೆ ಗಂಭೀರ ಆರೋಪವಿದೆ. ಪ್ರಶ್ನೆ ಮಾಡಿದ್ದ ನಿವೇದಿತಾ ವಿರುದ್ಧ ಸ್ವರ್ಣಲತಾ ಅವಾಜ್​​​ ಹಾಕಿದ್ದಾರೆ. ನಿವೇದಿತಾ ಅವಾಚ್ಯ ಶಬ್ಧ ಬಳಸಿದ ಆರೋಪ ಮಾಡಿದ್ಧಾರೆ. ನಾನೇ ಅಲಯೆನ್ಸ್​ ವಿವಿಗೆ ಚಾನ್ಸಲರ್​​​ ಎಂದು ಅವಾಜ್​​ ಹಾಕಿದ್ದು, ಇಲ್ಲಿಂದ ತೆರಳದಿದ್ದರೆ ಬಂದೂಕಿನಿಂದ ಸುಡುವೆ ಎಂದು ಬೆದರಿಸಿದ್ಧಾರೆ. ಸ್ವರ್ಣಲತಾ ಸೇರಿ ಹಲವರ ಮೇಲೆ ದೂರು ದಾಖಲಾಗಿದೆ. FIR ದಾಖಲಾಗುತ್ತಿದ್ದಂತೆ ಸ್ವರ್ಣಲತಾ ಎಸ್ಕೇಪ್​​​​ ಆಗಿದ್ದು, ಆನೇಕಲ್​​ ಪೊಲೀಸರು ಸ್ವರ್ಣಲತಾಗಾಗಿ ಬಲೆ ಬೀಸಿದ್ಧಾರೆ.