ನಮ್ಮ ಗೋಳು ಯಾರಗೆ ಹೇಳೋಣ ಹೇಳಿ…

Advertisement

ಕುಳಗೇರಿ ಕ್ರಾಸ್: ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಡವಾಗಿ ಬಂದ ಸಿಬ್ಬಂದಿಗಳನ್ನ ಹೊರಹಾಕಿ ಬೀಗ ಜಡಿದ ಖಾನಾಪೂರ ಎಸ್‌ಕೆ ಗ್ರಾಮಸ್ಥರು ಸರಿಯಾಗಿ ಕಾರ್ಯನಿರ್ವಹಿಸದ ಸಿಬ್ಬಂದಿಗಳನ್ನ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.

ಸರಿಯಾದ ಸಮಯಕ್ಕೆ ಹಾಜರಿದ್ದ ಸಿಬ್ಬಂದಿ ಸಹಿ ಹಾಕಿದ ನಂತರ ರಜಿಸ್ಟರ್ ತೆಗೆದುಕೊಂಡ ಗ್ರಾಮಸ್ಥರು ತಡವಾಗಿ ಬಂದ ಸಿಬ್ಬಂದಿಗಳಿಗೆ ಸಹಿ ಹಾಕಲು ಅವಕಾಶ ಕೊಡದೆ ಮೇಲಾಧಿಕಾರಿಗಳು ಬರುವವರೆಗೂ ಹೊರಹಾಕಿ ಪ್ರತಿಭಟಿಸಿದರು.

ಸುದ್ದಿ ತಿಳಿಸಿದ ಸ್ಥಳಕ್ಕೆ ಆಗಮಿಸಿದ ಟಿ.ಹೆಚ್.ಒ ಮಲ್ಲಿಕಾರ್ಜುನ ಅವರನ್ನ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ೧೫ ದಿನಗಳಿಂದ ವೈದ್ಯರೇ ಇಲ್ಲ. ಸಿಬ್ಬಂದಿ ಸಹ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಹೇಳುವವರೂ ಇಲ್ಲ… ಕೇಳುವವರೂ ಇಲ್ಲ… ರಾತ್ರಿಯಾದರೆ ಸಾಕು ಆಸ್ಪತ್ರೆಗೆ ಬೀಗ ಹಾಕಲಾಗುತ್ತೆ. ಇತ್ತಿಚೆಗೆ ನಿಮ್ಮ ಸಿಬ್ಬಂದಿ ಮನಸೋ ಇಚ್ಚೇ ಬರ‍್ತಾರೆ ಹೋಗ್ತಾರೆ ನಮ್ಮ ಗೋಳು ಯಾರಗೆ ಹೇಳೋಣ ಹೇಳಿ ಎಂದು ತಾಲೂಕು ಆರೋಗ್ಯ ಅಧಿಕಾರಿ ಮಲ್ಲಿಕಾರ್ಜುನ ಪಾಟೀಲ ಎದುರು ಗ್ರಾಮಸ್ಥರು ಅಳಲು ತೋಡಿಕೊಂಡರು.

ನಮ್ಮೂರಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಇದ್ದೂ ಇಲ್ಲದಂತಾಗಿದೆ. ಆರೋಗ್ಯ ಸೇವೆಗಳು ರೋಗಿಗಳಿಗೆ ಮರಿಚಿಕೆಯಾಗಿವೆ ಏನು ಮಾಡೋನ ಹೇಳಿ ಸರಿಯಾದ ಚಿಕಿತ್ಸೆ ಸಿಗದೆ ಕಾಸಗಿ ಆಸ್ಪತ್ರೆಗೆ ಹೋಗಲು ದುಡ್ಡಿಲ್ಲದ ಬಡವರು ತೊಂದರೆ ಅನುಬವಿಸುತ್ತಿದ್ದಾರೆ. ಸಾಕಷ್ಟು ಜನ ಬಡವರು ಹೆರಿಗೆಗಾಗಿ ಸಂಘಗಳಲ್ಲಿ ಸಾಲ ಮಾಡಿಕೊಂಡು ಪರದಾಡುತ್ತಿದ್ದಾರೆ. ನಮ್ಮೂರಲ್ಲಿ ಹೆಸರಿಗೆ ಮಾತ್ರ ಸರ್ಕಾರಿ ಆಸ್ಪತ್ರೆಯಾಗಿದೆ ಎಂದು ಅಧಿಕಾರಿಗಳೆದುರು ತೊಂದರೆ ಬಿಚ್ಚಿಟ್ಟರು.

ಸ್ಥಳಕ್ಕೆ ಆಗಮಿಸಿದ್ದ ಬಾದಾಮಿ ಪಿಎಸ್‌ಐ ವಿಠಲ್ ನಾಯಕ್ ಹಾಗೂ ಟಿಹೆಚ್‌ಒ ಸೇರಿ ಗ್ರಾಮಸ್ಥರ ಮನವಲಿಸಿ ತುರ್ತಾಗಿ ಸಿಬ್ಬಂದಿಗಳ ಸಭೆ ಕರೆದು ಪ್ರತಿ ಸಿಬ್ಬಂದಿಗಳಿಗೆ ಕ್ಲಾಸ್ ತೆಗೆದುಕೊಂಡರು. ಸರ್ಕಾರಿ ಸೇವೆ ದೇವರ ಸೇವೆ ಎಂದು ಭಾವಿಸಿ ಸರಿಯಾಗಿ ಕಾರ್ಯನಿರ್ವಹಿಸುವಂತೆ ಸಿಬ್ಬಂದಿಗಳಿಗೆ ತಿಳಿ ಹೇಳಿ ಇನ್ನೊಮ್ಮೆ ಹಿಗಾಗಂತೆ ನೋಡಿಕೊಳ್ಳಿ ಎಂದರು.

ಎಚ್ಚರಿಕೆ ನೀಡಿದ ಗ್ರಾಮಸ್ಥರು: ನಮ್ಮ ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ಎಲ್ಲ ಪ್ರತಿಯೊಬೆಬ ಸಿಬ್ಬಂದಿ ಎಷ್ಟು ಗಂಟೆಗೆ ಬರುತ್ತಾರೆ-ಹೋಗುತ್ತಾರೆ ಅವರ ಬಯೋಮೆಟ್ರಿಕ್ ಪರಿಶೀಲಸಬೇಕು. ಬೇಕಾಬಿಟ್ಟಿ ಬಂದು ಕಾರ್ಯನಿರ್ವಹಿಸುವವರ ವಿರುದ್ದ ಸಂಬಂದಿಸಿದ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು. ಇಲ್ಲದೆ ಹೋದರೆ ಸಾರ್ವಜನಿಕರೇ ತಕ್ಕ ಪಾಠ ಕಲಿಸಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದರು.
ಜನರ ತಾಳ್ಮೆಯನ್ನ ಪರಿಕ್ಷಿಸಬೇಡಿ ಜನರ ಸೇವೆಗಿರುವ ವೈದ್ಯರನ್ನು ಹಾಗೂ ಆರೋಗ್ಯ ಸಹಾಯಕರನ್ನು ಗ್ರಾಮದಲ್ಲೇ ಇದ್ದು ಸಾರ್ವಜನಿಕರಿಗೆ ಸರಿಯಾದ ಸಮಯದಲ್ಲಿ ಆರೋಗ್ಯ ಸೇವೆಗಳನ್ನ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು. ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳು ಇರುವ ಕಾರಣ ಅಪಘಾತಗಳು ಹೆಚ್ಚುತ್ತಲಿವೆ ಕಾರಣ ಪ್ರಥಮ ಚಿಕಿತ್ಸೆ ಸಿಗದೆ ಸಾಕಷ್ಟು ಜನ ಪ್ರಾಣ ಕಳೆದುಕೊಂಡಿದ್ದಾರೆ. ನಮ್ಮ ಆಸ್ಪತ್ರೆಗೆ ಸುಮಾರು ವರ್ಷಗಳ ಬೇಡಿಕೆಯಾದ ೧೦೮ ಅಂಬ್ಯೂಲೆನ್ಸ್ ಒದಗಿಸಿ ಜನರ ಪ್ರಾಣ ಉಳಿಸಿ ಎಂದು ಮನವಿ ಮಾಡಿದರು.