ನವಲಗುಂದ: ರೈತ ಹುತಾತ್ಮ ದಿನಾಚರಣೆ

Advertisement

ನವಲಗುಂದ: ನವಲಗುಂದ – ನರಗುಂದ ರೈತ ಬಂಡಾಯ ಹೋರಾಟದಲ್ಲಿ ಹುತಾತ್ಮರಾದ ರೈತರ ಸ್ಮರಣಾರ್ಥ ರೈತ ಹುತಾತ್ಮ ದಿನವನ್ನು ಪಟ್ಟಣದಲ್ಲಿ ಆಚರಿಸಲಾಯಿತು.
ಬಂಡಾಯ ಹೋರಾಟದಲ್ಲಿ ಹುತಾತ್ಮರಾದ ನವಲಗುಂದ ಶ್ರೀ ಬಸಪ್ಪ ಶಿವಪ್ಪ ಲಕ್ಕುಂಡಿ ಅವರ ಸ್ಮರಣಾರ್ಥ ನಿರ್ಮಿಸಿದ ವೀರಗಲ್ಲಿಗೆ ವಿವಿಧ ರೈತ ಸಂಘಟನೆಗಳ ಮುಖಂಡರು, ರೈತ ಹೋರಾಟಗಾರರು, ರೈತ ಕಾರ್ಮಿಕ ಸಂಘಟನೆಗಳ ಮುಖಂಡರು ಮಾಲೆ ಹಾಕಿ, ಪೂಜೆ ಸಲ್ಲಿಸಿ ಗೌರವ ಸಲ್ಲಿಸಿದರು.


ಇದೇ ವೇಳೆ ಕಳಸಾ ಬಂಡೂರಿ ನಾಲಾ ಜೋಡಣೆ ಯೋಜನೆಯನ್ನ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ ಶೀಘ್ರ ಅನುಷ್ಠಾನ ಮಾಡಬೇಕು ಎಂದು ರೈತ ಮುಖಂಡರು ಆಗ್ರಹಿಸಿದರು. ಅಲ್ಲದೇ, ಯುವ ರೈತ ಮೈಲಾರಪ್ಪ ವೈದ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಪತ್ರ ಬರೆದರು. ಈ. ಮೂಲಕ ಯೋಜನೆಯ ಅವಶ್ಯಕತೆ ಅಗತ್ಯ ಎಂಬುದನ್ನು ಪತ್ರದ ಮೂಲಕ ಗಮನ ಸೆಳೆದರು. ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರಾದ ಬಸವರಾಜ, ರೈತ ಮುಖಂಡ ಶಂಕರ ಅಂಬಲಿ ಸೇರಿದಂತೆ ಅನೇಕರಿದ್ದರು.

ನವಲಗುಂದದಲ್ಲಿ ಹುತಾತ್ಮ ರೈತರಿಗೆ ಗೌರವ ಸಮರ್ಪಿಸಿದ ಬಳಿಕ ಯುವ ರೈತ ಮೈಲಾರಪ್ಪ ವೈದ್ಯ ಅವರು ಕಳಸಾ ಬಂಡೂರಿ ನಾಲಾ ಯೋಜನೆ ಶೀಘ್ರ ಅನುಷ್ಠಾನಕ್ಕೆ ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಕ್ತದಲ್ಲಿ ಪತ್ರ ಬರೆಯಲು ಮುಂದಾದಾಗ ನರ್ಸಿಂಗ್ ಸಿಬ್ಬಂದಿ ಸಿರಿಂಜ್ ನಲ್ಲಿ ರಕ್ತ ತೆಗೆದ ನೋಟ