ನಾನು ಬರುತ್ತಿದ್ದೇನೆ

Advertisement

ನಾ ಬರುವೆ…. ಬಂದರೆ ಬರುವೆ…. ನಾನು ಸೈಕಲ್ ಮೇಲಾದರೂ ಬರುತ್ತೇನೆ… ಬೈಕ್ ಮೇಲಾದರೂ ಬರುತ್ತೇನೆ… ಲಾರಿಯಲ್ಲಾದರೂ ಬರುತ್ತೇನೆ… ವಾಕ್ ಮಾಡುತ್ತಾದರೂ ಬರುತ್ತೇನೆ… ಕ್ಯಾಟ್ ವಾಕಾದರೂ ಮಾಡಿಕೊಂಡು ಬರುತ್ತೇನೆ… ಒಟ್ಟಿನಲ್ಲಿ ನಾನು ಬರುತ್ತೇನೆ… ಬರುತ್ತೇನೆ… ಬರುತ್ತೇನೆ. ನನ್ನ ಸ್ವಾಗತಿಸಲು ಹಾರ- ತುರಾಯಿ ತರಬೇಡಿ…. ಪಟಾಕಿ ಹೊಡಿಬೇಡಿ… ಬ್ಯಾಂಡು ಬಾರಿಸಬೇಡಿ…. ಬಾಯಲ್ಲಿ ಸೀಮೆಎಣ್ಣೆ ಹಾಕಿಕೊಂಡು ಭರ‍್ರೆಂದು ಊದಿ ಕಿಡಿ ಹಾರಿಸಬೇಡಿ.. ಅವನು ಬರುತ್ತಾನೆ ಎಂದು ಬೀಗರು ಬಿಜ್ಜರನ್ನು ಕರೆತರಬೇಡಿ…. ನಾ ಬರುತ್ತೇನೆ…. ನಾ ಬರುತ್ತೇನೆ ನಾ ಬರುತ್ತೇನೆ….. ಒಂದೊಂದು ಬಾರಿ ಗಾಳಿಗುಂಟ ಬರಲೇ…. ಮೋಡಗಳ ಜತೆ ಜಾರಿ ಬರಲೇ…. ಅಥವಾ ಹಾರುತ್ತಿರುವ ಪಕ್ಷಿ ಮೇಲೆ ಕುಳಿತು ಬರಲೇ…. ಕಣ್ಣುಮುಚ್ಚಿಕೊಂಡು ಹಿರಿಯರನ್ನು ನೆನಪಿಸಿಕೊಂಡು ಸುಂಯ್ ಅಂತ ಬರಲೇ? ಈಗ ಹೇಗಿದ್ದರೂ ಮಳೆಗಾಲ…. ಮಳೆ ಹನಿಯಂತೆ ನಾನು ಭುವಿಗೆ ಬಂದು ಬಿಡಲೇ ಅಂತ ಅನಿಸುತ್ತದೆ… ಅವೆಲ್ಲ ಹೋಗಲಿ ನಾನು ಬರುತ್ತೇನೆ.. ನಾನು ಬರುತ್ತೇನೆ….
ಇನ್ನೇನು ಅವನು ಬರಲ್ಲ ಬುಡಿ ಅಂದವರೆಷ್ಟೋ…. ಅವನು ಅಲ್ಲಿದ್ದಾನೆ… ಇಲ್ಲಿದ್ದಾನೆ ಅಂದವರೆಷ್ಟೋ…. ಅವರಿಗೆಲ್ಲ ತಿಳಿಸಿಬಿಡಿ… ನಾ ಬರುತ್ತಿದ್ದೇನೆ…. ನಾ ಬರುತ್ತಿದ್ದೇನೆ…. ನಾನು ಇಲ್ಲಿಗೆ ಓಡಿ ಬಂದಿಲ್ಲ…. ಲೋಹದ ರೆಕ್ಕೆಯಲ್ಲಿ ಕುಳಿತು ಹಾರಿಬಂದೆ…. ಈಗ ಬರುತ್ತಿದ್ದೇನೆ… ಬರುತ್ತಿದ್ದೇನೆ…
ಯಲ್ಲಿದ್ದೀಯಪ್ಪಾ….. ಎಂದು ಅಂದವರಿಗೆ ಬಂದು ಉತ್ತರ ಹೇಳುತ್ತೇನೆ…. ನೋಡುತಿರಿ… ನಾನು ಬರುತ್ತಿದ್ದೇನೆ… ಬರುತ್ತಿದ್ದೇನೆ
..ನಾ ಬಂದು ಕಾರಿನಲ್ಲಿ ಕುಳಿತರೆ ನನಗೆ ಹಿಂದೊಂದು ಮುಂದೊಂದು ಗಾಡಿ ಬೇಡ… ಕುಂಯ್ ಎಂದು ಕೂಗುವ ಸೈರನ್ ಬೇಡ… ನಾ ಸುಮ್ಮನೇ ಬರುತ್ತಿದ್ದೇನೆ… ಬರುತ್ತಿದ್ದೇನೆ…. ನನ್ನ ನೋಡಿ ನಿಮ್ಮ ಕಣ್ಣಿಂದ ಆನಂದ ಭಾಷ್ಪ ಸುರಿಯದಿರಲಿ…. ಆ ದಿನವನ್ನು ಯಾರೂ ಮರೆಯದಿರಲಿ… ಏನಾದರಾಗಲಿ ನಾ ಬರುತ್ತಿದ್ದೇನೆ….. ಬರುತ್ತಿದ್ದೇನೆ… ಬರುತ್ತಿದ್ದೇನೆ…. ಅಷ್ಟೆ.