ನಾಲ್ಕು ಗ್ಯಾರಂಟಿಗೆ 57,910 ಕೋಟಿ ರೂ. ಮೀಸಲು

Advertisement

ಬೆಂಗಳೂರು: ರಾಜ್ಯ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ದಾಖಲೆಯ 14ನೇ ಬಜೆಟ್ ಮಂಡಿಸಿದ್ದಾರೆ. 2023-2024ನೇ ಸಾಲಿನ ಒಟ್ಟು 3,27,747 ಕೋಟಿ ರೂಪಾಯಿಯ ಬಜೆಟ್‌ ಮಂಡಿಸಿದ್ದಾರೆ. ಈ ಪೈಕಿ ಯುವ ನಿಧಿಯನ್ನು ಹೊರತು ಪಡಿಸಿ 57,910 ಕೋಟಿ ರೂ. ಹಣವನ್ನು 4 ಗ್ಯಾರಂಟಿ ಯೋಜನೆಗಳಿಗೆ ಮೀಸಲಿಡಲಾಗಿದೆ.

‘ಶಕ್ತಿ’ ಯೋಜನೆ
ರಾಜ್ಯದ ಎಲ್ಲ 4 ಸಾರಿಗೆ ನಿಗಮಗಳ ಬಸ್‌ಗಳಲ್ಲಿ ಮಹಿಳೆಯ ಉಚಿತ ಪ್ರಯಾಣದ ಶಕ್ತಿ ಯೋಜನೆಗೆ ವಾರ್ಷಿಕ 4,000 ಕೋಟಿ ರೂ.

ಗೃಹ ಜ್ಯೋತಿ
200 ಯುನಿಟ್ ವರೆಗಿನ ಗೃಹ ಬಳಕೆ ಉಚಿತ ವಿದ್ಯುತ್ ಯೋಜನೆ ಗೃಹಜ್ಯೋತಿಗೆ ವಾರ್ಷಿಕ 13,910 ಕೋಟಿ ರೂ.

ಗೃಹ ಲಕ್ಷ್ಮಿ
ಕುಟುಂಬದ ಯಜಮಾನಿಗೆ ಮಾಸಿಕ 2,000 ರೂ. ನೆರವು ನೀಡುವ ಗೃಹಲಕ್ಷ್ಮೀ ಯೋಜನೆಗೆ ವಾರ್ಷಿಕ 30,000 ಕೋಟಿ ರೂ.

ಅನ್ನ ಭಾಗ್ಯ
ಎಲ್ಲ ಅರ್ಹ ಫಲಾನುಭವಿಗಳಿಗೆ 10 ಕೆಜಿ ಅಕ್ಕಿ ನೀಡುವ ಅನ್ನಭಾಗ್ಯ ಯೋಜನೆಗೆ ವಾರ್ಷಿಕ 10,000 ಕೋಟಿ ರೂ.

ಯುವನಿಧಿ:
2022-23ರಲ್ಲಿ ತೇರ್ಗಡೆ ಹೊಂದಿದ ವೃತ್ತಿ ಶಿಕ್ಷಣ ಸೇರಿದಂತೆ ಎಲ್ಲಾ ಪದವಿ ಪೂರೈಸಿದ ಯುವಕ ಯುವತಿಯರಿಗಾಗಿ ಇರುವ ಯುವ ನಿಧಿ ಯೋಜನೆಗೆ ಹಣ ನಿಗದಿ ಮಾಡಿಲ್ಲ. ಯೋಜನೆಗೆ ಕೌಶಲ್ಯಾಭಿವೃದ್ಧಿ ಇಲಾಖೆಗೆ ನೀಡಲಾಗಿರುವ ಅನುದಾನದಲ್ಲಿ ಬಳಕೆ ಮಾಡಲಾಗುತ್ತದೆ.