ನಿಂದೆ ಸಹಿಸಿಯೂ ಮಾಡುವ ಪರೋಪಕಾರ ಶ್ರೇಷ್ಠ

ಶುಕ್ರವಾರ
Advertisement

ಕೊನೆಯ ಮತ್ತು ಶ್ರೇಷ್ಠ ಪ್ರವಾದಿಯಾಗಿ ಮಹಮ್ಮದ ಪೈಗಂಬರರು ಜಗತ್ತಿಗೆ ತಮ್ಮ ಉಪದೇಶದ ಮೂಲಕ ಮಾನವರಾಗಿ ಬದುಕುವ ಅರಿವು ಮಾಡಿಕೊಟ್ಟರು. ಚಿಕ್ಕವರಿರುವಾಗಲೇ ತಂದೆ ತಾಯಿ ಕಳೆದುಕೊಂಡು ಕಕ್ಕನ ಹತ್ತಿರ ಬೆಳೆದು ದೊಡ್ಡವರಾದರು ಸದಾ ಅಲ್ಹಾಜನ ಪ್ರಾರ್ಥನೆಯ ಅವರ ದಿನಚರಿಯಾಗಿತ್ತು. ತಮ್ಮ ಹತ್ತಿರ ಬಂದ ಅನುಯಾಯಿಗಳಿಗೆ ಸದಾಚಾರವನ್ನೇ ಉಪದೇಶ ಮಾಡಿದವರು.
ರಸ್ತೆಯಲ್ಲಿ ತನ್ನ ಸಾಮಾನಿನ ಗಂಟು ಎತ್ತು ತಲೆಯ ಮೇಲೆ ಇಟ್ಟುಕೊಂಡು ಹೋಗುವ ಪ್ರಯತ್ನ ಮಾಡುತ್ತಿದ್ದ ಒಬ್ಬ ಮುದುಕಿ ಕಂಡ ಹಜರತ್ ಮಹ್ಮದ ಪೈಗಂಬರರು ಕನಿಕರ ತೋರಿ. ಅವಳ ಬಳಿ ಸಾಗಿ ನೀನು ಹೊರುವ ಗಂಟು ಬಲು ಭಾರವಿದೆ. ನಿನ್ನಿಂದಾಗದು. ನನಗೆ ನಿನ್ನ ಮನೆ ತೋರಿಸು ನಾನೂ ಈ ಗಂಟನ್ನು ಹೊತ್ತುಕೊಂಡು ಬರುತ್ತೇನೆ ಎಂದು ಹೇಳಿ ಆ ಗಂಟನ್ನು ತಲೆಯ ಮೇಲೆ ಹೊತ್ತು ಆ ಮುದುಕು ಸಾಗುವ ದಾರಿಯಲ್ಲಿಯೇ ಬೆನ್ನ ಹಿಂದೆಯೇ ನಡೆಯತೊಡಗಿದರು.
ಮುದಿಕಿಗೆ ಸಂತೋಷವಾಯಿತು. ಆ ಮುದುಕಿ ಪೈಗಂಬರರ ಕುರಿತು ಮಾತನಾಡುತ್ತ ಇಲ್ಲೊಬ್ಬ ಮಹ್ಮದ ಪೈಗಂಬರೆ ಎಂಬವನಿದ್ದಾನೆ. ಆತ ಏನೇನೋ ಹೇಳಿ ಜನರ ತಲೆ ಕಡಿಸುತ್ತಿದ್ದಾನೆ. ನೀನು ಆತನ ಹತ್ತಿರ ಹೋಗಬೇಡ ಅವನು ಬಹಳ ಕೆಟ್ಟವನಿದ್ದಾನೆ ಎಂದು ಅರಿವಿಲ್ಲದೇ ದಾರಿಯುದ್ಧಕ್ಕೂ ಬೈಯ್ಯುತ್ತಲೇ ಸಾಗಿದಳು ಆಗ ಹಜರತ್ ಪೈಗಂಬರರು ಆಕೆ ಮನೆಯ ಮುಂದೆ ಗಂಟು ಇಳಿಸಿ ಮರಳುವಾಗ ಆ ಮುದುಕಿ ಉಪಕಾರ ಮಾಡಿದವ ನೀನು ಯಾರು ಹೆಸರೇನು ಎಂದು ಕೇಳುತ್ತಾಳೆ.
ಅಮ್ಮಾ ನೀನು ದಾರಿಯುದ್ದಕ್ಕೂ ಯಾರನ್ನು ಬೈಯ್ಯುತ್ತ ಬಂದೆಯೋ ಆತನೇ ನಾನು ಎಂದು ಹೇಳುತ್ತಾರೆ. ಆಗ ಮುದುಕಿಗೆ ಪಶ್ಚಾತ್ತಾಪವಾಗಿ ಅವರ ಕಾಲಿಕೆ ಬಿದ್ದು ಕ್ಷಮಾಪಣೆ ಕೇಳುತ್ತಾಳೆ. ಅಂದರೆ ತನಗೆ ಏನೇ ಕೆಟ್ಟ ಬಯಸಿದರೂ ಕೂಡ ಆ ಬಗ್ಗೆ ಯೋಚಿಸದೇ ಪರರಿಗೆ ಒಳ್ಳೆಯದನ್ನೇ ಮಾಡಬೇಕು ಎಂದು ಹಜರತ್ ಪೈಗಂಬರರು ನಡೆದು ತೋರಿಸಿದ್ದಾರೆ. ಸುತ್ತಲಿನವರು ಉಪವಾಸ ಬಿದ್ದಾಗ ತಾನು ಹೊಟ್ಟೆ ತುಂಬ ಉಣ್ಣುವದು ಸಾಧು ಕೆಲಸವಲ್ಲ. ಅಷ್ಟೆ ಅಲ್ಲ; ಆತ ಮುಸಲ್ಮಾನನೇ ಅಲ್ಲ; ಎಂದು ಹೇಳಿದ್ದಾರೆ. ಮಾನವೀಯತೆಯೇ ಇಸ್ಲಾಂ ಧರ್ಮದ ಮೂಲ ಜೀವಾಳವಾಗಿದ್ದು ಸಕಲರಿಗೆ ಲೇಸನನ್ನೇ ಬಯಸುವದು. ದಯೆಯನ್ನು ಅನುಷ್ಠಾನಗೊಳಿಸಿದಂತೆ. ಅವರ ದಾರಿಯಲ್ಲಿ ನಡೆದರೆ ಉತ್ತಮ ಸದ್ಗತಿ ಸಿಗುವುದು ಸತ್ಯ.