ನಿಮ್ಮನ್ನು ಡಿಕೆ ಬದಲು ಕೇಡಿ ಎಂದು ಕರೆಯಬಹುದಲ್ವಾ …?

Advertisement


ಚಿಕ್ಕಮಗಳೂರು: ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕೇಡಿ ರೀತಿಯಲ್ಲಿ ಆಡಬಾರದು. ಕೇಡಿಯ ರೀತಿಯಲ್ಲಿ ನಡೆದುಕೊಳ್ಳುವುದು ಒಳ್ಳೆಯ ಲಕ್ಷಣ ಅಲ್ಲ. ಅವ್ರ ಪಕ್ಷಕ್ಕೂ ಒಳ್ಳೆಯ ಲಕ್ಷಣ ಅಲ್ಲ. ರಾಜ್ಯಕ್ಕಂತೂ ಒಳ್ಳೆಯ ಲಕ್ಷಣವಂತೂ ಅಲ್ವೇ ಅಲ್ಲ. ಹೀಗೆಂದು ಹೇಳಿದವರು ಬಿಜೆಪಿ ಮುಖಂಡ ಹಾಗೂ ಮಾಜಿ ಶಾಸಕ ಸಿ.ಟಿ.ರವಿ
ಸಿ.ಟಿ.ರವಿ ಅವರಿಂದ ಲೂಟಿ ರವಿ ಎಂದು ದೂಷಣೆಗೆ ಒಳಗಾದ ಬಿಜೆಪಿ ನಾಯಕ ಸಿ.ಟಿ. ರವಿ ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಡಿ.ಕೆ. ಶಿವಕುಮಾರ್ ಅವರ ಮಾತು ಮತ್ತು ವರ್ತನೆಗಳನ್ನು ಆಕ್ಷೇಪಿಸಿದರು. ತಮ್ಮನ್ನು ಲೂಟಿ ರವಿ ಎಂದು ಕರೆದ ಡಿಕೆಶಿ ಅವರನ್ನು ಅವರದೇ ಹೆಸರನ್ನು ತಿರುಗಿಸಿ ’ಕೇಡಿ ಎಂದು ವ್ಯಾಖ್ಯಾನಿಸಿದರು. ನಿಮ್ಮನ್ನು ಡಿಕೆ ಬದಲು ಕೇಡಿ ಎಂದು ಕರೆಯಬಹುದಲ್ವಾ ಎಂದು ಕೇಳಿದರು.
ಐಟಿ ದಾಳಿಯಲ್ಲಿ ಸಿಕ್ಕಿರುವುದು ಕಾಂಗ್ರೆಸ್‌ನವರ ಬೇನಾಮಿ ಹಣ ಎನ್ನುವುದು ನಮಗೆ ಬಂದಿರುವ ವರದಿ. ಇವರೇ ನಂಬರ್‌ಒನ್, ನಂಬರ್‌ಟು ಬೇನಾಮಿಗಳ ಮೂಲಕ ಸಂಗ್ರಹಿಸಿರುವ ಹಣ ಎಂದು ನಮಗೆ ಬಂದಿರುವ ಮಾಹಿತಿ. ನಮ್ಮ ಆರೋಪವಿದು ಅದನ್ನು ನಿರಾಕರಿಸುವ ಅಧಿಕಾರ ಅವರಿಗಿದೆ ಎಂದು ತಿಳಿಸಿದರು.
ನಿರಾಕರಿಸುವ ಭರದಲ್ಲಿ ಕುಮಾರಸ್ವಾಮಿ ಅವರಿಗೆ ನಕಲಿ ಸ್ವಾಮಿ ಅಂತಹ ಹೇಳುವುದು, ಆಶ್ವತ್ ನಾರಾಯಣ ಅವರಿಗೆ ನವರಂಗಿ ನಾರಾಯಣ ಅನ್ನುವುದು, ನನಗೆ ಸಿ.ಟಿ ತೆಗೆದು ಲೂಟಿ ಅನ್ನುವುದು ಹಾಗದರೆ ನಿಮ್ಮ ಡಿಕೆ ತೆಗೆದು ಕೇಡಿ ಅನ್ನಬಹುದಲ್ಲ ಎಂದು ಪ್ರಶ್ನೆ ಮಾಡಿದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೇಡಿ ಮನಸ್ಥಿತಿಯಲ್ಲಿ ವಿವರಿಸುವುದನ್ನು ಬಿಡಬೇಕು. ಅವರಿಗಿರುವ ಜವಾಬ್ದಾರಿಯ ಅರಿವಿಟ್ಟುಕೊಂಡು ನಡೆದುಕೊಳ್ಳಬೇಕು. ಅದನ್ನು ಬಿಟ್ಟು ಹೆದರಿಸುವ, ಬೆದರಿಸುವ, ರಾಜಕಾರಣ ಮಾಡಬಾರದು. ಇಲ್ಲಿ ಹೆದರೋಕೆ ಬೆದರೋಕೆ ಯಾರಿದ್ದಾರೆ? ಅವರೇನು ರಾಕ್ಷಸ ವಂಶಕ್ಕೆ ಸೇರಿದವರಾ? ಕೇಡಿ ವಂಶಕ್ಕೆ ಸೇರಿದವರ ಎಂದು ಮರು ಪ್ರಶ್ನೆಹಾಕಿದರು.