ನಿಮ್ಮ ತುಘಲಕ್‌ ಆಡಳಿತ ಕರ್ನಾಟಕದಲ್ಲಿ ನಡೆಯುವುದಿಲ್ಲ

Advertisement

ಬೆಂಗಳೂರು: ಕೇಸರಿ ಶಾಲು ತೆಗೆದುಕೊಂಡು ವಿಧಾನ ಪರಿಷತ್ ಒಳಗೆ ಹೋಗುತ್ತಿದ್ದ ಬಿಜೆಪಿ ಸದಸ್ಯರನ್ನು ಪೊಲೀಸರು ತಡೆದ ಘಟನೆ ನಡೆದಿದೆ.
ಈ ಕುರಿತು ಕರ್ನಾಟಕ ಬಿಜೆಪಿಯು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡು ಆಕ್ರೋಶ ವ್ಯಕ್ತಪಡಿಸಿದೆ. ವಿಧಾನ ಪರಿಷತ್​ಗೆ ಕೇಸರಿ ಶಾಲು ತೆಗೆದುಕೊಂಡು ಹೋಗುತ್ತಿದ್ದ ಬಿಜೆಪಿ ಸದಸ್ಯ ಕೇಶವಪ್ರಸಾದ್ ಅವರನ್ನು ಪೊಲೀಸರು ತಡೆದಿದ್ದರು. ಈ ಕುರಿತಂತೆ ಪೋಸ್ಟ್‌ ಮಾಡಿರುವ ಅವರು ಸಿದ್ದರಾಮಯ್ಯ ಸರ್ಕಾರ ವಿಧಾನಸೌಧದ ಒಳಗೆ ಬಿಜೆಪಿಯ ಶಾಸಕರು ಕೇಸರಿ ಶಾಲು ಹಾಕಿಕೊಳ್ಳುವುದಕ್ಕೆ ಕಡಿವಾಣ ಹಾಕಲು ಮೌಖಿಕ ಆದೇಶ ಹೊರಡಿಸಿದೆ. ಅಧಿಕೃತವಾಗಿ ಲಿಖಿತ ಆದೇಶ ಹೊರಡಿಸುವುದಕ್ಕೂ ಎದೆಗಾರಿಕೆ ಇಲ್ಲದ ಹೇಡಿ ಸರ್ಕಾರ, ಪೊಲೀಸರನ್ನು ದುರ್ಬಳಕೆ ಮಾಡಿಕೊಂಡು ಅವರ ಮೂಲಕ ಇಂತಹ ಕೃತ್ಯ ಮಾಡಿಸಲಾಗುತ್ತಿದೆ. ಜೈ ಶ್ರೀರಾಮ್‌ ಎಂದರೆ ಕರ್ನಾಟಕ ಕಾಂಗ್ರೆಸ್‌ ನಾಯಕರ ಮೈಮೇಲೆ ಸೈತಾನ್‌ ಬಂದು ಬಿಡುತ್ತದೆ. ಅದೇ ಪಾಕಿಸ್ತಾನ್‌ ಜಿಂದಾಬಾದ್‌ ಎಂದರೆ ಮೈ ರೋಮಾಂಚನವಾಗುತ್ತಿರುವುದು ಕನ್ನಡಿಗರ ದುರಂತ! ಹಲೋ ಕಾಂಗ್ರೆಸ್ಸಿಗರೇ, ನಿಮ್ಮ ತುಘಲಕ್‌ ಆಡಳಿತ ಕರ್ನಾಟಕದಲ್ಲಿ ನಡೆಯುವುದಿಲ್ಲ, ನಡೆಸಲು ಬಂದರೆ ನೋಡಿಕೊಂಡು ಸುಮ್ಮನೆ ಕೂರವಷ್ಟು ಹೇಡಿಗಳಲ್ಲ ಸ್ವಾಭಿಮಾನಿ ಕನ್ನಡಿಗರು. ಎಚ್ಚರಿಕೆಯಿಂದ ಇರಿ! ಎಂದು ಬರೆದುಕೊಂಡಿದ್ದಾರೆ.