ನಿರ್ಮಾಪಕ ವಿರುದ್ಧ 10 ಕೋಟಿ ಮಾನನಷ್ಟ ಮೊಕದ್ದಮೆ

Advertisement

ಬೆಂಗಳೂರು: ಸುದೀಪ್ ಹಣ ಪಡದು, ಡೇಟ್ಸ್ ನೀಡಿಲ್ಲ ಅಂತೆಲ್ಲಾ ಆರೋಪಿಸಿದ್ದ ಕುಮಾರ್ ಆರೋಪದ ನಂತರ ಒಗಟಿನ ರೀತಿಯಲ್ಲಿ ಟ್ವೀಟ್ ಒಂದನ್ನು ಮಾಡಿ ಸುಮ್ಮನಾಗಿದ್ದ ಸುದೀಪ್, ಇದೀಗ ಮೌನ ಮುರಿದು ಕಾನೂನು ಸಮರಕ್ಕೆ ಮುಂದಾಗಿದ್ದಾರೆ. ಇತ್ತಿಚೆಗೆ ನಟ ಸುದೀಪ್ ವಿರುದ್ದ ನಿರ್ಮಾಪಕ ಎಂ.ಎನ್ ಕುಮಾರ್ ಸುದ್ದಿಗೋಷ್ಠಿ ಮೂಲಕ ಸಾಕಷ್ಟು ಆರೋಪ ಮಾಡಿದ್ದರು.
ಇತ್ತೀಚೆಗೆ ನಟ ಸುದೀಪ್ (Sudeep) ವಿರುದ್ದ ನಿರ್ಮಾಪಕ ಎಂ.ಎನ್ ಕುಮಾರ್ ಸುದ್ದಿಗೋಷ್ಠಿ ಮೂಲಕ ಸಾಕಷ್ಟು ಆರೋಪ ಮಾಡಿದ್ದರು. ಸುದೀಪ್ ಹಣ ಪಡದು, ಡೇಟ್ಸ್ ನೀಡಿಲ್ಲ ಅಂತೆಲ್ಲಾ ಆರೋಪಿಸಿದ್ದರು. ಕುಮಾರ್ ಆರೋಪದ ನಂತರ ಒಗಟಿನ ರೀತಿಯಲ್ಲಿ ಟ್ವೀಟ್ ಒಂದನ್ನು ಮಾಡಿ ಸುಮ್ಮನಾಗಿದ್ದ ಸುದೀಪ್, ಇದೀಗ ಮೌನ ಮುರಿದು ಕಾನೂನು ಸಮರಕ್ಕೆ ಮುಂದಾಗಿದ್ದಾರೆ. ವಕೀಲರ ಮೂಲಕ ನಿರ್ಮಾಪಕ ಕುಮಾರಗೆ ನೋಟಿಸ್ ಕಳುಹಿಸಿರುವ ಸುದೀಪ್, ‘ನೀವು ನನ್ನ ತಾಳ್ಮೆಯನ್ನ ಪರೀಕ್ಷಿಸಿದ್ದೀರಿ. ಸುಳ್ಳಿನ ಕಂತೆ ಕಟ್ಟಿ ತೇಜೋವಧೆ ಮಾಡಿದ್ದೀರಿ. ನಾನು ನ್ಯಾಯಾಲಯ ಮತ್ತು ಸಂವಿಧಾನ ನಂಬಿರುವವನು. ನಾನು ನನ್ನದೇ ರೀತಿಯಲ್ಲಿ ಉತ್ತರ ಕೊಡಲು ಕಾಯುತ್ತಿದ್ದೆ. ನೀವು ಮಾಡಿರುವ ಎಲ್ಲಾ ಆರೋಪಗಳನ್ನು ಸಾಬೀತು ಪಡಿಸಿ, ಇಲ್ಲವಾದಲ್ಲಿ 10 ಕೋಟಿ ಮಾನನಷ್ಟದ ದಂಡ ಕಟ್ಟಿಕೊಡಿ’ ಎಂದಿದ್ದಾರೆ.