ನೇಣು ಕುಣಿಕೆ, ವಿಷದ ಬಾಟಲಿಯೊಂದಿಗೆ ನೇಕಾರರ ಪ್ರತಿಭಟನೆ

ನೇಕಾರ ಪ್ರತಿಭಟನೆ
Advertisement

ಬೆಂಗಳೂರು: ಬಾಗಲಕೋಟೆ ತೇರದಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ನೇಕಾರ ಅಭ್ಯರ್ಥಿಯನ್ನೇ ಕಣಕ್ಕಿಳಿಸಬೇಕು ಇಲ್ಲವಾದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ನೇಣು ಕುಣಿಕೆ ಹಾಗೂ ವಿಷದ ಬಾಟಲಿ ಕೈಯಲ್ಲಿ ಹಿಡಿದುಕೊಂಡು ನೇಕಾರರು ಪ್ರತಿಭಟನೆ ನಡೆಸಿದ ಘಟನೆ ಬಿಜೆಪಿ ವರಿಷ್ಠರಿದ್ದ ಬೆಂಗಳೂರಿನ ನೆಲಮಂಗಲದ ಗೋಲ್ಡನ್ ರೆಸಾರ್ಟ್‌ನ ಮುಂಭಾಗದಲ್ಲಿ ನಡೆಯಿತು.
ಹಾಲಿ ಶಾಸಕ ಸಿದ್ದು ಸವದಿಯವರು ನೇಕಾರರನ್ನು ದುರ್ಬಳಕೆ ಮಾಡಿಕೊಂಡಿದ್ದಾರಲ್ಲದೆ, ಕ್ಷೇತ್ರದಲ್ಲಿ ನಿರ್ಣಾಯಕ ಮತದಾರರಾಗಿರುವ ನೇಕಾರ ಸಮುದಾಯದಿಂದ ಕಣಕ್ಕಿಳಿಯಲು ಜನತೆಯ ಅಪೇಕ್ಷೆಯಾಗಿದ್ದು, 15 ವರ್ಷಗಳ ಬೇಡಿಕೆಯಾಗಿರುವ ನೇಕಾರ ಸಮುದಾಯಕ್ಕೆ ಈ ಬಾರಿ ಪ್ರಾಧಾನ್ಯತೆ ನೀಡಲೇಬೇಕೆಂದು ಟಿಕೆಟ್ ಆಕಾಂಕ್ಷಿ ರಾಜು ಅಂಬಲಿ ತಿಳಿಸಿದರು.
ವ್ಯಕ್ತಿ ಬದಲಾವಣೆಯಾಗಲೇಬೇಕು ಕ್ಷೇತ್ರದಲ್ಲಿ 6 ಜನ ಪ್ರಬಲ ಅಭ್ಯರ್ಥಿಗಳಾಗಿದ್ದು, ಹಾಲಿ ಶಾಸಕ ಸಿದ್ದು ಸವದಿಯವರಿಗೆ ಟಿಕೆಟ್ ನೀಡಿದರೆ ಸೋಲು ನಿಶ್ಚಿತವಾಗಿದ್ದು, ಆ ಕಾರಣಕ್ಕೆ ನೇಕಾರ ಸಮುದಾಯಕ್ಕೆ ಮಹತ್ವ ನೀಡಿದ್ದಲ್ಲಿ ನಿರಾಯಾಸ ಗೆಲುವು ಪಕ್ಷದ್ದಾಗಿದೆ ಎಂದು ಅಂಬಲಿ ತಿಳಿಸಿದರು. ಈ ಬಾರಿ ಮನೋಹರ ಶಿರೋಳ, ಕಿರಣಕುಮಾರ ದೇಸಾಯಿ, ಡಾ. ಎಂ.ಎಸ್. ದಾನಿಗೊಂಡ, ಭೀಮಶಿ ಮಗದುಮ್, ಬಸವರಾಜ ಬಾಳಿಕಾಯಿ ಆಕಾಂಕ್ಷಿಗಳಾಗಿದ್ದಾರೆ. ಯಾರಿಗಾದರೂ ಟಿಕೆಟ್ ನೀಡಿದ್ದಲ್ಲಿ ಒಮ್ಮತದ ನಿಲುವಾಗಲಿದೆ ಎಂದರು.

ನೇಕಾರ ಪ್ರತಿಭಟನೆ