ನೇಪಥ್ಯಕ್ಕೆ ಸರಿದ ರಾಜ್ಯದ ಕೊನೆಯ ನೂಲಿನ ಗಿರಣಿ

ನೂಲಿನ ಗಿರಣಿ
Advertisement

ಉತ್ತರ ಕರ್ನಾಟಕದ ಮ್ಯಾಂಚೆಸ್ಟರ್ ಎಂದೇ ಗುರುತಿಸಿಕೊಂಡಿದ್ದ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ನಗರ ದಿನದಿಂದ ದಿನಕ್ಕೆ ಜವಳಿ ಉದ್ಯಮ ಕ್ಷೀಣಿಸುತ್ತ ಇದೀಗ ನಗರಕ್ಕೆ ಕಿರೀಟದಂತಿದ್ದಬನಹಟ್ಟಿ ಸಹಕಾರಿ ನೂಲಿನ ಗಿರಣಿ’ಯೂ ರಾಜ್ಯದ ಏಕೈಕ ಗಿರಣಿಯಾಗಿ ನಿರ್ವಹಣೆಯಲ್ಲಿತ್ತು. ಇದೀಗ ತನ್ನ ಕಾರ್ಯ ಸ್ಥಗಿತಗೊಳಿಸುವ ಮೂಲಕ ಶರಣಾಗತಿಯಾಗುವಲ್ಲಿ ಕಾರಣವಾಗಿದೆ.
ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿಯ ನೂಲಿನ ಗಿರಣಿಯು 48 ವರ್ಷಗಳ ಕಾಲ ತನ್ನ ಗತವೈಭವದೊಂದಿಗೆ ಸಾವಿರಾರು ನೇಕಾರ ಕುಟುಂಬಗಳಿಗೆ ಆಶಾಕಿರಣವಾಗಿ ಶ್ರಮಿಸಿದ ನೇಕಾರರಿಂದಲೇ ಸ್ಥಾಪಿತಗೊಂಡಿರುವ ಗಿರಣಿ ಬಂದ್ ಆಗಿರುವದು ನಿಜಕ್ಕೂ ಎಂಥವರ ಮನ ಕಲಕುವಂಥದ್ದು.

ಕೇಂದ್ರ ಸರ್ಕಾರದ ಜಾಗತೀಕರಣ ನೀತಿ, ಕಚ್ಚಾ ವಸ್ತುಗಳ ಬೆಲೆ ಏರಿಕೆ, ಜಿಎಸ್‌ಟಿ ಹಾಗೂ ಗಿರಣಿಯು ಕಾಲ ಕಾಲಕ್ಕೆ ಉನ್ನತೀಕರಣ ಹೊಂದದಿರುವುದೇ ತನ್ನ ಕಾರ್ಯ ಸ್ಥಗಿತಗೊಳಿಸುವಲ್ಲಿ ಪ್ರಮುಖ ಕಾರಣವಾಗಿದೆ.
ಕಳೆದ ಮೂರು ವರ್ಷಗಳಲ್ಲಿ ಹತ್ತಿಯ ಬೆಲೆ 60 ಸಾವಿರ ಕ್ಯಾಂಡಿ(356 ಕೆಜಿ)ಯ ದರ 1.15 ಲಕ್ಷಕ್ಕೆ ಏರಿಕೆ ಕಂಡಿದೆ. ಪ್ರತಿ ಕೆಜಿಗೆ 350ಗೆ ಮಾರಾಟವಾಗುತ್ತಿದ್ದ ಯಾರ್ನ್ ಇದೀಗ 250 ರೂ.ಗಳಷ್ಟು ಇಳಿಕೆ ಕಂಡಿದ್ದು, ಮಾಸಿಕ 60 ರಿಂದ 80 ಸಾವಿರ ಕೆಜಿಯಷ್ಟು ಯಾರ್ನ್ ಉತ್ಪಾದನೆಯಿಂದ 30 ರಿಂದ 40 ಲಕ್ಷ ರೂ.ಗಳಷ್ಟು ಹಾನಿಯಾಗುವಲ್ಲಿ ಗಿರಣಿ ಕಾರಣವಾಗಿ, ದುಡಿಯುವ ಬಂಡವಾಳವಿಲ್ಲದೆ ಹಾಗೂ ಸರ್ಕಾರದ ಸಕಾಲಿಕ ಸಹಕಾರವಿಲ್ಲದೆ ಕೊನೆಗೂ ಅಧೋಗತಿಯಲ್ಲಿ ನಿಂತಿರುವದು ಖೇಧಕರವಾಗಿದೆ.

ಸಂಪೂರ್ಣ ಸುದ್ದಿಯನ್ನು ಶುಕ್ರವಾರದ ಸಂಯುಕ್ತ ಕರ್ನಾಟಕದಲ್ಲಿ ಓದಿ…