ನ. 14ಕ್ಕೆ ದೆಹಲಿ-ಹುಬ್ಬಳ್ಳಿ ಮೊದಲ ಇಂಡಿಗೋ ವಿಮಾನ

flight
Advertisement

ಹುಬ್ಬಳ್ಳಿ: ಹುಬ್ಬಳ್ಳಿ-ದೆಹಲಿ ನಡುವೆ ಇಂಡಿಗೋ ವಿಮಾನಯಾನ ನವೆಂಬರ್ 14ರಿಂದ ಆರಂಭವಾಗಿದ್ದು, ಟಿಕೆಟ್ ಬುಕ್ಕಿಂಗ್ ಪ್ರಾರಂಭವಾಗಿದೆ. ಇದರಿಂದ ಇನ್ನೂ ದೆಹಲಿ ಹುಬ್ಬಳ್ಳಿಗೆ ಹತ್ತಿರವಾಗಲಿದೆ.
ಸಾರ್ವಜನಿಕರು, ಉದ್ಯಮಿಗಳು, ಕೇಂದ್ರ ಸಚಿವರು, ಜನಪ್ರತಿನಿಧಿಗಳ ಮನವಿ ಮೇರೆಗೆ ಇಂಡಿಗೋ ಏರಲೈನ್ಸ್ ಪ್ರತಿದಿನ ದೆಹಲಿ-ಹುಬ್ಬಳ್ಳಿ ಹಾಗೂ ಹುಬ್ಬಳ್ಳಿ-ದೆಹಲಿ ನಡುವೆ ವಿಮಾನಯಾನ ಆರಂಭಿಸಿದೆ.
ಇಂಡಿಗೋ ವಿಮಾನ ಪ್ರತಿದಿನ ದೆಹಲಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನವೆಂಬರ್ ೧೪ರಂದು ವಿಮಾನ ಸಂಖ್ಯೆ ೬ಇ ೫೬೨೪ ಬೆಳಿಗ್ಗೆ ೧೦ಕ್ಕೆ ಹೊರಟು ಹುಬ್ಬಳ್ಳಿಯನ್ನು ೧೨-೪೫ಕ್ಕೆ ತಲುಪುವುದು. ವಿಮಾನ ಸಂಖ್ಯೆ ೬ಇ ೫೬೨೫ ಮರಳಿ ಮಧ್ಯಾಹ್ನ ೧-೧೫ಕ್ಕೆ ಹುಬ್ಬಳ್ಳಿಯಿಂದ ಹೊರಟು ೩-೪೫ಕ್ಕೆ ದೆಹಲಿ ತಲುಪಲಿದೆ.
ಇಂಡಿಗೋ ಸಂಸ್ಥೆ ಪ್ರಯಾಣಿಕರ ಟಿಕೆಟ್ ಬುಕ್ಕಿಂಗ್ ಆರಂಭಿಸಿದೆ. ಈ ವಿಮಾನ ಸೇವೆ ಆರಂಭದಿಂದ ಉತ್ತರ ಕರ್ನಾಟಕದ ಜನತೆಗೆ ರಾಷ್ಟ್ರದ ರಾಜಧಾನಿ ತಲುಪಲು ಅನುಕೂಲವಾಗಲಿದೆ. ದೇಶದ ಬೇರೆ ಬೇರೆ ಸ್ಥಳಗಳಿಗೆ ಹುಬ್ಬಳ್ಳಿಯಿಂದ ಹೆಚ್ಚಿನ ವಿಮಾನಯಾನ ಸಂಪರ್ಕದಿಂದ ಈ ಭಾಗದ ಸರ್ವತೋಮುಖ ಅಭಿವೃದ್ಧಿಗೆ ಹೆಚ್ಚಿನ ಚಾಲನೆಯೂ ದೊರಕಲಿದೆ.