ಪಂಚಮಸಾಲಿ ಮೀಸಲಾತಿ: ಸಿ.ಸಿ. ಪಾಟೀಲ ಸಂಧಾನ

ಸಿ.ಸಿ. ಪಾಟೀಲ
Advertisement

ಶಿಗ್ಗಾವಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ, ತರಾತುರಿಯಲ್ಲಿ ಮೀಸಲಾತಿ ಘೋಷಣೆ ಮಾಡಲು ಬರುವುದಿಲ್ಲ, ಮೀಸಲಾತಿ ಕೊಡಲು ಕಾನೂನಿನ ಅಡೆತಡೆ ಇದೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ಹೇಳಿದ್ದಾರೆ.
ಪಟ್ಟಣದ ಖಾಸಗಿ ಹೊಟೇಲ್‌ನಲ್ಲಿ ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಶಾಸಕ ಬಸನಗೌಡ ಪಾಟೀಲ ಯತ್ನಾಳ ಜೊತೆ ಸಂಧಾನ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೀಸಲಾತಿ ಕೊಡಲು ಜಾಗ ಖಾಲಿ ಇಲ್ಲ, ದೇಶದ ಎರಡು ರಾಜ್ಯಗಳಲ್ಲಿ ತರಾತುರಿಯಲ್ಲಿ ಮೀಸಲಾತಿ ಘೋಷಣೆ ಮಾಡಿದ್ದರ ಪರಿಸ್ಥಿತಿ ಏನಾಗಿದೆ ನಿಮಗೆಲ್ಲ ಗೊತ್ತಿದೆ. ಸಿಎಂ ಬೊಮ್ಮಾಯಿಯವರು ಸಮಾಜದ ಪರವಾಗಿದ್ದಾರೆ. ಸಿಎಂ ಮೇಲೆ ಸಂವಿಧಾನಾತ್ಮಕವಾಗಿ ಜವಾಬ್ದಾರಿ ಇದೆ. ಮೀಸಲಾತಿ ಕೊಡುತ್ತಾರೆ, ಹೋರಾಟ ಮಾಡೋದು ಬೇಡ ಎಂದು ಸ್ವಾಮೀಜಿಯವರ ಜೊತೆ ಚರ್ಚೆ ಮಾಡಿದ್ದೇನೆ. ಹೋರಾಟ ಕೈ ಬಿಡುವಂತೆ ಸ್ವಾಮೀಜಿಯವರಿಗೆ ಮನವಿ ಮಾಡಿದ್ದೇನೆ. ಸ್ವಾಮೀಜಿಯವರು ಇವತ್ತಿನ ಹೋರಾಟ ಮುಂದೂಡುವುದಾಗಿ ಹೇಳಿದ್ದಾರೆ ಎಂದು ಅವರು ತಿಳಿಸಿದರು.

ಸಿ.ಸಿ. ಪಾಟೀಲ