ಪಕ್ಷಕ್ಕಿಂತ ವ್ಯಕ್ತಿಗಳು ದೊಡ್ಡವರಾಗಿದ್ದಾರೆ

Advertisement

ಹುಬ್ಬಳ್ಳಿ: ಇಂದು ಪಕ್ಷಕ್ಕಿಂತ ಪಕ್ಷದ ನಾಯಕರು ದೊಡ್ಡವರಾಗಿದ್ದಾರೆ. ಇಂದಿನ ರಾಜಕಾರಣ ಹೊಲಸಾಗಿದೆ. ಚುನಾವಣೆ ಕೂಡ ಇದೆ ರೀತಿ ಆಗಿದ್ದು, ಎಷ್ಟು ದುಡ್ಡ ಇಟ್ಟಿದ್ದೀಯಾ ಎನ್ನುವಂತಾಗಿದೆ ಎಂದು ಮಾಜಿ ಸಚಿವ ಎಚ್. ವಿಶ್ವನಾಥ್ ಹೇಳಿದರು.
ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು, ಮಾಜಿ ಮುಖ್ಯಮಂತ್ರಿ ತಾಕತ್, ಧಮ್ ಇದೆಯಾ ಎಂದು ಕೇಳುತ್ತಿದ್ದಾರೆ ಅಂದರೆ ಎಲ್ಲಿಗೆ ಹೋಗಿದ್ದೇವಿ ಎಂಬುದನ್ನು ನಾವು ನೋಡಬೇಕು. ರಾಜಕಾರಣ ರಿಪೇರಿ ಆಗಬೇಕು ಎಂದರು.
ಇನ್ನೂ ಡಿ.ಕೆ.ಶಿವಕುಮಾರ್ ಕುರಿತು ರಮೇಶ ಜಾರಕಿಹೊಳಿ ಅವರ ಆರೋಪ ಕುರಿತು ಮಾತನಾಡಿ, ರಾಜಕಾರಣದಲ್ಲಿ ಯಾರ ಯಾರನ್ನೂ ಮುಗಿಸುವುದಕ್ಕೆ ಆಗುವುದಿಲ್ಲ. ಜಾರಕಿಹೊಳಿ ಅದನ್ನು ಹೇಳಬಾರದು. ನಾವೆಲ್ಲ ಒಟ್ಟಿಗೆ ಇದ್ದವರು, ರಮೇಶ್ ಹಾಗೆ ಮಾತಾಡಬಾರದು. ನಾವೆಲ್ಲ ಬಂದು ಬಿಜೆಪಿ ಸರ್ಕಾರ ಅಧಿಕಾರಕ್ಕೆ ತಂದ್ವಿ ಎಂದರು.
ಬಿ.ಎಸ್. ಯಡಿಯೂರಪ್ಪ ನಮ್ಮ‌ ಮ್ಯಾಜಿಕ್ 150 ಅಂತಾರೆ, ಸಿದ್ದರಾಮಯ್ಯ ಡಿಕೆ ಶಿವಕುಮಾರ್ 115 ನಮ್ಮ ಮ್ಯಾಜಿಕ್ ಅಂತಾರೆ, ಕುಮಾರಸ್ವಾಮಿ 123 ಅಂತಾರೆ. ಎಲ್ಲ ಅವರವರೇ ನಂಬರ್ ಕೊಡ್ತಿದ್ದಾರೆ. ಹಾಲಿ ಮಾಜಿ ಸಿಎಂಗಳು ಪುಡಿ ರೌಡಿಗಳು ತರಹ ಮಾತನಾಡುತ್ತಿದ್ದಾರೆ ಎಂದರು.
ಶೇ. 40 ಪರ್ಸೆಂಟ್ ಕಮೀಷನ್ ವಿಚಾರವಾಗಿ ವಿಶ್ವನಾಥ್ ಪ್ರತಿಕ್ರಿಯೆ ನೀಡಿ, ನೀನ ಕದ್ದಿಲ್ವಾ,ನೀನ ಕದ್ದಿಲ್ವಾ ಎಂದು ಮಾತಾನಾಡುವಂತಾಗಿದೆ. ರಾಜಕೀಯ ನಾಯಕರು ತಮ್ಮ ಮೌಲ್ಯ ಕಳೆದುಕೊಂಡಿದ್ದೇವೆ ಎಂದರು.