ಪಕ್ಷವಿದ್ರೆ ನಾವೆಲ್ಲಾ, ಪಕ್ಷ ಇಲ್ಲಾಂದ್ರೆ ನಾವ್ಯಾರೂ ಇಲ್ಲ…

Advertisement

ಕಾರವಾರ: ಕೋಲಾರ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಕಗ್ಗಂಟು ವಿಚಾರವಾಗಿ ಕುಮಟಾದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿಕೆ ನೀಡುದ್ದು, ಕೋಲಾರ ಟಿಕೆಟ್ ಸಂಬಂಧ ಗೊಂದಲ ಆಗಿರುವುದನ್ನು ಮಾಧ್ಯಮದಲ್ಲಿ ಹಾಗೂ ಗೆಳೆಯರ ಮೂಲಕ ತಿಳಿದುಕೊಂಡಿದ್ದೇನೆ.
ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಇನ್ನೂ ಅನೌನ್ಸ್ ಆಗಿಲ್ಲ, ಪಕ್ಷದಲ್ಲಿ ಶಿಸ್ತು ಮುಖ್ಯ, ಯಾರೂ ಶಿಸ್ತು ಮುರಿಯಬಾರದು.
ಪಕ್ಷವಿದ್ರೆ ನಾವೆಲ್ಲಾ, ಪಕ್ಷ ಇಲ್ಲಾಂದ್ರೆ ನಾವ್ಯಾರೂ ಇಲ್ಲ, ನಾನು ಎಲ್ಲರಿಗೂ ತಿಳಿಸಿದ್ದೇನೆ, ಎಲ್ಲರೂ ಒಪ್ಪಿಕೊಂಡಿದ್ದಾರೆ. ಏನೇ ಸಮಸ್ಯೆಯಿದ್ರೂ ನಾನು ಸಿಎಂ ಸೇರಿ ಸಮಸ್ಯೆ ಬಗೆಹರಿಸುತ್ತೇವೆ. ಪಕ್ಷಕ್ಕೆ ಆತಂಕ ತರುವುದನ್ನು ಯಾರೂ ಮಾಡಬಾರದು,ಬಿಜೆಪಿಯವರು ಮೊದಲು ತಮ್ಮ ತಟ್ಟೆಯಲ್ಲಿ ಇರುವ ಹೆಗ್ಗಣ ಸರಿಪಡಿಸಿಕೊಳ್ಳಲಿ ಎಂದರು.