ಪರಮಾತ್ಮನು ಆರು ತೆರನಾಗಿರುವನು…

Annadanishwara Swami
Advertisement

ಅಹಮೇಕ, ಪರಮಾನಂದ, ಪರಮಾತ್ಮಾ ಸದಾಶಿವ, ಸೃಷ್ಟ್ಯಾ ಮಾಯಾಮಯಂ ಶಕ್ತಿಂ ತಥಾಹಂ ಷಡ್‌ವಿಧೋವಂ
ಆಗಮದಲ್ಲಿ ಶಿವನು ಪಾರ್ವತಿಗೆ ಹೀಗೆ ಬೋಧಿಸುತ್ತಾನೆ. ವಸ್ತುತಃ ನಾನೊಬ್ಬನೆ ಪರಮಾನಂದ ಸ್ವರೂಪನು, ಪರಮಾತ್ಮನು, ಸದಾಶಿವನು, ಶ್ರೇಷ್ಠವಾದ ಆನಂದವನ್ನು ಅನುಭವಿಸುವವನು ನಾನು ಮಾಯಾ ಸ್ವರೂಪಿಯಾದ ಶಕ್ತಿಯನ್ನು ಸೃಷ್ಟಿಸಿಕೊಂಡು ಆರು ತೆರನಾಗಿದ್ದೇನೆ.
ವೀರಶೈವ, ಷಟ್‌ಸ್ಥಲದಲ್ಲಿ ಅವರೋಹಣ ಮತ್ತು ಆರೋಹಣ ಎಂಬುದಾಗಿ ಪ್ರತಿಪಾದಿಸಲಾಗಿದೆ. ಅವರೋಹಣವೆಂದರೆ, ಪ್ರವೃತ್ತಿ ಮಾರ್ಗವೆನ್ನುವರು, ಆರೋಹಣವೆಂದರೆ ನಿವೃತ್ತಿ ಮಾರ್ಗವೆನ್ನುವರು, ಸ್ಥಳತತ್ವವೆಂದು ಕರೆಯಲ್ಪಡುವ, ಶಿವನು ಪೂಜ್ಯ=ಪೂಜ್ಯಕ ಭಾವದಿಂದ ಆರು ತೆರನಾಗುವನು, ಐಕ್ಯನಿಂದ ಶರಣ-ಪ್ರಾಣಲಿಂಗ-ಪ್ರಸಾದಿ-ಮಹೇಶ್ವರ-ಭಕ್ತನೆನಿಸುವನು, ಭಕ್ತನು ನಿವೃತ್ತಿ ಕ್ರಮದಿಂದ ಆಚಾರಲಿಂಗವನ್ನು ಆರಾಧಿಸುತ್ತಾ ಗುರುಲಿಂಗವನ್ನು ಶಿವಲಿಂಗವನ್ನು, ಜಂಗಮಲಿಂಗವನ್ನು, ಮಹಾಲಿಂಗವನ್ನು, ಆರಾಧಿಸಿ ಆ ಮಹಾಲಿಂಗದಲ್ಲಿ ಸಮರಸ ಹೊಂದುವ ಮಾರ್ಗವೇ ನಿವೃತ್ತಿ ಕ್ರಮವೆನಿಸುವುದು, ಇದುವೇ ಷಟಸ್ಥಲವೆನಿಸಿದೆ. ಪರಮಾತ್ಮನು ಆರು ತೆರನಾದಂತೆ ಲಿಂಗರೂಪದಲ್ಲಿ ಪೂಜ್ಯ ಭಾವಹೊಂದಿ ಆರು ತೆರನಾಗಿದ್ದನು.