ಪರಸಪ್ಪನಿಗೆ ದಡೇಸಗೂರು ಧಮ್ಕಿ: ಮತ್ತೊಂದು ಆಡಿಯೋ ವೈರಲ್

ದಡೇಸಗೂರು
Advertisement

ಕೊಪ್ಪಳ: ಪಿಎಸ್‌ಐ ಹಗರಣಕ್ಕೆ ಸಂಬಂಧಿಸಿದಂತೆ ಶಾಸಕ ಬಸವರಾಜ ದಡೇಸಗೂರು ಅವರದ್ದು ಎನ್ನಲಾದ ಎರಡು ಆಡಿಯೋಗಳು ವೈರಲ್ ಆಗಿದ್ದವು. ಆದರೆ, ಮಂಗಳವಾರ ಮತ್ತೊಂದು ಆಡಿಯೋ ವೈರಲ್ ಆಗಿದ್ದು, ಮತ್ತಷ್ಟು ಕೂತುಹಲ ಕೆರಳಿಸಿದೆ.
ಪಿಎಸ್‌ಐ ಹಗರಣ ಕೇವಲ ಅಧಿಕಾರಿಗಳನ್ನು ಮಾತ್ರ ಸುತ್ತುವರೆದಿತ್ತು. ಆದರೆ, ಈ ಸರಣಿ ಆಡಿಯೋಗಳಿಂದಾಗಿ ಸರ್ಕಾರವೂ ಹಗರಣದಲ್ಲಿ ಭಾಗಿಯಾಗಿದೇ ಎಂಬ ಅನುಮಾನ ಸೃಷ್ಟಿಯಾಗುವಂತೆ ಮಾಡಿದೆ. ಅಲ್ಲದೇ ವೈರಲ್ ಆಗಿರುವ ಆಡಿಯೋ ಧ್ವನಿ ನನ್ನದೇ ಎಂದು ಶಾಸಕರು ಒಪ್ಪಿಕೊಂಡಿದ್ದಾರೆ. ಆದರೆ, ಹಣ ಪಡೆದಿಲ್ಲ. ಬೇರೆಯವರ ಜಗಳ ರಾಜೀ ಪಂಚಾಯಿತಿ ಮಾಡಿದ್ದೇನೆ ಎಂದು ಎರಡು ಆಡಿಯೋಗಳ ಕುರಿತು ಸಮಜಾಯಿಸಿ ನೀಡಿದ್ದಾರೆ.
ಪ್ರಸ್ತುತ ಮೂರನೇ ಆಡಿಯೋ ಕೂಡಾ ವೈರಲ್ ಆಗಿದ್ದು, ಮಾಧ್ಯಮಗಳ ಮುಂದೆ ಹೋಗಿ ಸುದ್ದಿಗೋಷ್ಠಿ ಮಾಡುತ್ತಿಯಾ?. ನಿನ್ನನ್ನು ಒದ್ದು ಬಿಡುತ್ತೇನೆ ಎಂದು ಶಾಸಕರು ಪರಸಪ್ಪನಿಗೆ ಅವಾಚ್ಯ ಶಬ್ಧಗಳಿಂದ ಕಿಡಿಕಾರಿದ್ದಾರೆ. ಇದಕ್ಕೆ ಪರಸಪ್ಪನೂ ಸಹಿತ ನೀವು ಬಾಯಿ ಸಡಿಲ ಬಿಡಬೇಡಿ. ಅವಾಚ್ಯ ಶಬ್ಧಗಳಿಂದ ನಿಂದಿಸಬೇಡಿ. ನಾನೂ 25 ವರ್ಷ ಪೊಲೀಸ್ ಇಲಾಖೆಯಲ್ಲಿಯೇ ಕೆಲಸ ಮಾಡಿದ್ದೇನೆ. ಏನು ಮಾಡಬೇಕು ಎಂಬುದು ನನಗೂ ಗೊತ್ತಿದೆ. ಹೊಡೆಯುವುದಾದರೆ ಹೊಡೆಯಿರಿ ಎಂದು ಪ್ರತಿಕ್ರಿಯಿಸಿದ್ದಾರೆ.
ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಕುರಿತು ಪ್ರತಿಕ್ರಿಯಿಸಿದ್ದು, ಪಿಎಸ್‌ಐ ಹಗರಣದ ತನಿಖೆ ನಡೆಯುತ್ತಿದೆ. ಚಾರ್ಚ್ ಶೀಟ್ ಕೂಡಾ ತಯಾರಿಸಲಾಗಿದೆ. ಶಾಸಕ ಬಸವರಾಜ ದಡೇಸಗೂರು ಮೇಲೆ ಆರೋಪವಿದ್ದು, ಇವರನ್ನು ತನಿಖೆಗೆ ಒಳಪಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಇದರಿಂದಾಗಿ ಪಿಎಸ್‌ಐ ಹಗರಣದ ತನಿಖೆಯಲ್ಲಿ ಶಾಸಕರ ಹೆಸರು ಸೇರಿಸುತ್ತಾರೊ, ಇಲ್ಲವೋ ಎಂಬುದನ್ನು ಕಾದುನೋಡಬೇಕಿದೆ. ಅಲ್ಲದೇ ತನಿಖೆ ನಡೆದರೆ ಮತ್ತೆ ಯಾರ ತಲೆಗೆ ಸುತ್ತಿಕೊಳ್ಳಲಿದೆ ಎಂಬ ಕುತೂಹಲ ಮೂಡಿದೆ.


ವೈರಲ್ ಆಗಿರುವ ಆಡಿಯೋದಲ್ಲಿನ ಧ್ವನಿ ನನ್ನದಲ್ಲ. ಶಾಸಕರ ಜೊತೆ ಯಾರು ಮಾತನಾಡಿದ್ದಾರೋ ಗೊತ್ತಿಲ್ಲ. ನನ್ನ ಮಗ ಪಿಎಸ್‌ಐ ಪರೀಕ್ಷೆ ಅರ್ಜಿ ಸಲ್ಲಿದ್ದನು. ಆದರೆ, ಅವನು ದೈಹಿಕ ಪರೀಕ್ಷೆಯಲ್ಲಿಯೇ ಉತ್ತೀರ್ಣನಾಗಿಲ್ಲ. ನಾನೇಕೆ ಪಿಎಸ್‌ಐ ಪರೀಕ್ಷೆ ಉತ್ತೀರ್ಣಗೊಳಿಸಲು ಹಣ ನೀಡಲಿ?. ಶಾಸಕ ಬಸವರಾಜ ದಡೇಸಗೂರು ಆಪ್ತನಿಗೆ 15 ಲಕ್ಷ ರೂ. ನೀಡಿದ್ದೇನೆ. ರಾಜೀಪಂಚಾಯಿತಿ ಮಾಡಿ, ವ್ಯವಹಾರ ಬಗೆ ಹರಿಸಿದ್ದಾರೆ. ಪರಸಪ್ಪ ಎನ್ನುವವರು ನಮ್ಮ ಊರಿನಲ್ಲಿ ನಾಲ್ವರಿದ್ದಾರೆ.

ಪರಸಪ್ಪ